ರೈಲಿನಿಂದ ಪ್ರಯಾಣಿಕನನ್ನು ಹೊರಗೆ ತಳ್ಳಿದ ಟಿಟಿಇ !

ಶುಕ್ರವಾರ, 18 ನವೆಂಬರ್ 2022 (09:39 IST)
ಲಕ್ನೋ : ಚಲಿಸುತ್ತಿದ್ದ ರೈಲಿನೊಳಗಿನಿಂದ ಟಿಟಿಇ ತಳ್ಳಿದ ಹಿನ್ನೆಲೆ ಸೇನಾ ಸಿಬ್ಬಂದಿಯೊಬ್ಬರು ಕಾಲನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
 
ಗಾಯಗೊಂಡವರನ್ನು ಸೋನು ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ನಿಂದ ಬರೇಲಿ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 2 ರಲ್ಲಿ ವ್ಯಕ್ತಿಯನ್ನು ತಳ್ಳಲಾಗಿದೆ.

ಇದೀಗ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಸುಪಾನ್ ಬೋರೆ ವಿರುದ್ಧ ಕೊಲೆ ಯತ್ನದ ಆರೋಪವನ್ನು ಹೊರಿಸಲಾಗಿದ್ದು, ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಸದ್ಯ ನಾವು ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮೊರಾದಾಬಾದ್ ವಿಭಾಗದ ಹಿರಿಯ ಹಣಕಾಸು ವ್ಯವಸ್ಥಾಪಕ ಸುಧೀರ್ ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ