ನವದೆಹಲಿ: ವಿವಾದಿತ ಲೇಹ್ ಮತ್ತು ಲಡಾಖ್ ಭೂಪ್ರದೇಶವನ್ನು ಚೀನಾದ್ದು ಎಂದು ಬಿಂಬಿಸಿದ್ದಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ ಭಾರತೀಯರ ಕ್ಷಮೆ ಕೋರಿದೆ.
ಈ ಸಂಬಂಧ ಟ್ವಿಟರ್ ಸಂಸ್ಥೆ ಭಾರತೀಯ ಸರ್ಕಾರಕ್ಕೆ ಲಿಖಿತ ಪತ್ರ ಮುಖೇನ ಕ್ಷಮೆ ಕೇಳಿದೆ. ನವಂಬರ್ 30 ರೊಳಗಾಗಿ ತಪ್ಪು ಸರಿಪಡಿಸುವುದಾಗಿ ಹೇಳಿದೆ ಎಂದು ಸಂಸದೀಯ ಸಮಿತಿ ಮುಖ್ಯಸ್ಥೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಲಡಾಖ್ ಚೀನಾ ಭೂಪ್ರದೇಶಕ್ಕೆ ಸೇರಿದ್ದು ಎಂದು ತಪ್ಪಾಗಿ ಬಿಂಬಿಸಿತ್ತು.