ಮತ್ತೆ ಟ್ವಿಟರ್ ಎಡವಟ್ಟು: ಲಡಾಖ್, ಜಮ್ಮು-ಕಾಶ್ಮೀರ ಭಾರತದ ಮ್ಯಾಪ್ ನಲ್ಲೇ ಇಲ್ಲ!
ಮಂಗಳವಾರ, 29 ಜೂನ್ 2021 (11:26 IST)
ನವದೆಹಲಿ: ಒಂದೆಡೆ ಕೇಂದ್ರ ಸರ್ಕಾರದ ಐಟಿ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿ ಕೆಂಗಣ್ಣಿಗೆ ಗುರಿಯಾಗಿದ್ದರೆ ಟ್ವಿಟರ್ ಸಂಸ್ಥೆ ಈಗ ಭಾರತದ ಮ್ಯಾಪ್ ನಲ್ಲಿ ಎಡವಟ್ಟು ಮಾಡಿ ಆಕ್ರೋಶಕ್ಕೆ ಗುರಿಯಾಗಿದೆ.
ಪ್ರಮುಖ ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್ ತನ್ನ ಮ್ಯಾಪ್ ಸೆಕ್ಷನ್ ನಲ್ಲಿ ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ನ್ನು ಪ್ರತ್ಯೇಕ ಮಾಡಿದೆ! ಇವೆರಡೂ ಪ್ರತ್ಯೇಕ ದೇಶ ಎನ್ನುವಂತೆ ಬಿಂಬಿಸಿದೆ.
ಇದಕ್ಕೂ ಮೊದಲು ಹಿಂದೊಮ್ಮೆ ಲೇಹ್ ಪ್ರದೇಶ ಚೀನಾದ್ದು ಎಂದು ಭೂಪಟದಲ್ಲಿ ತೋರಿಸಿತ್ತು. ಇದೀಗ ಮತ್ತೆ ಎಡವಟ್ಟು ಮಾಡಿದ್ದು, ಭಾರತದ ಶಿಖರವೆಂದೇ ಬಿಂಬಿತವಾಗಿರುವ ಜಮ್ಮು ಕಾಶ್ಮೀರವನ್ನೇ ಪ್ರತ್ಯೇಕ ಮಾಡಿದೆ.