ರಾಷ್ಟ್ರಗೀತೆಗೆ ಅಪಮಾನ ಮಾಡಿದ ಇಬ್ಬರು ಪತ್ರಕರ್ತರನ್ನು ಹೊರಗಟ್ಟಿದ ಸೇನಾಧಿಕಾರಿ

ಬುಧವಾರ, 25 ಮೇ 2016 (15:47 IST)
ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಎದ್ದು ನಿಂತು ಗೌರವ ತೋರದ ಇಬ್ಬರು ಪತ್ರಕರ್ತರನ್ನು ಸಮಾರಂಭದಿಂದ ಹೊರಹೊಗುವಂತೆ ಸೇನಾಧಿಕಾರಿ ಆದೇಶಿಸಿದ ಘಟನೆ ವರದಿಯಾಗಿದೆ.
 
ಜಮ್ಮು ಕಾಶ್ಮಿರದ ಲೈಟ್ ಇನ್‌ಫಾಂಟ್ರಿ ರೆಜಿಮೆಂಟ್‌ನ ಪಾಸಿಂಗ್ ಔಟ್ ಪರೇಡ್‌ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಕಂದಾಯ ಸಚಿವ ಮತ್ತು ಪಿಡಿಪಿ ಹಿರಿಯ ನಾಯಕ ಸಯ್ಯದ್ ಬಶ್ರತ್ ಅಹ್ಮದ್ ಅವರ ಮುಂದೆ ಇಬ್ಬರು ಪತ್ರಕರ್ತರು ರಾಷ್ಟ್ರಗೀತೆಗೆ ಅಗೌರವ ತೋರಿದ ಘಟನೆ ನಡೆದಿದೆ. 
 
ಸಮಾರಂಭದ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೇನೆ ಕೋರಿತ್ತು. ಅದರಂತೆ, ರಾಷ್ಟ್ರಗೀತೆ ಹಾಡುವಾಗ ನಾನು ಸಮಾರಂಭದ ವಿವರಗಳನ್ನು ಕಲೆಹಾಕುವಲ್ಲಿ ನಿರತನಾಗಿದ್ದೆ.  ರಾಷ್ಟ್ರಗೀತೆ ಮುಕ್ತಾಯವಾದ ನಂತರ ಸೇನಾಧಿಕಾರಿಯೊಬ್ಬರು ನಮ್ಮ ಬಳಿಗೆ ಬಂದು, ರಾಷ್ಟ್ರಗೀತೆ ಹಾಡುವಾಗ ಯಾಕೆ ಎದ್ದು ನಿಲ್ಲಲಿಲ್ಲ ಎಂದು ಪ್ರಶ್ನಿಸಿ, ನಿಮ್ಮಂತಹ ವ್ಯಕ್ತಿಗಳ ಅಗತ್ಯ ನಮಗಿಲ್ಲ. ಕೂಡಲೇ ಕಾರ್ಯಕ್ರಮದಿಂದ ತೆರಳಿ ಎಂದು ಗುಡುಗಿದ್ದಾಗಿ ಕಾಶ್ಮಿರ್ ರೀಡರ್ ಪತ್ರಿಕೆಯ ವರದಿಗಾರ ಜುನೈದ್ ಬಝಾಝ್ ತಿಳಿಸಿದ್ದಾರೆ. 
 
ಮತ್ತೊಬ್ಬ ಪತ್ರಕರ್ತ ರೈಸಿಂಗ್ ಕಾಶ್ಮಿರ ಪತ್ರಿಕೆಯ ವರದಿಗಾರನಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ