ಇಬ್ಬರು ಅಸಹಜ ಸಾವು : ನಿಫಾ ಸೋಂಕು ಶಂಕೆ

ಬುಧವಾರ, 13 ಸೆಪ್ಟಂಬರ್ 2023 (11:32 IST)
ತಿರುವನಂತಪುರಂ : ಕೇರಳದಲ್ಲಿ ಇಬ್ಬರು ಅಸಹಜ ಸಾವನ್ನಪ್ಪಿದ್ದು, ನಿಫಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬಳಿಕ ಕೇರಳ ಆರೋಗ್ಯ ಇಲಾಖೆ ಕೋಯಿಕೋಡ್ ಜಿಲ್ಲೆಯಲ್ಲಿ ಎಚ್ಚರಿಕೆ ನೀಡಿದೆ.
 
ಮೃತಪಟ್ಟ ಇಬ್ಬರಿಗೆ ನಿಫಾ ಲಕ್ಷಣಗಳಿದ್ದವು ಎಂದು ತಿಳಿದುಬಂದಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ಕುರಿತು ಮಾತನಾಡಿದ ವೀಣಾ ಜಾರ್ಜ್, ಮೃತಪಟ್ಟ ಇಬ್ಬರಿಗೂ ನಿಫಾ ಲಕ್ಷಣಗಳಿದ್ದವು. ಇದರಲ್ಲಿ ಒಬ್ಬರು ಆಗಸ್ಟ್ 30ರಂದು ಸಾವನ್ನಪ್ಪಿದ್ದಾರೆ.

ಅವರು ಸ್ಯಾಂಪಲ್ ಕಳುಹಿಸಿರಲಿಲ್ಲ. ಇನ್ನೊಬ್ಬರು ಸೋಮವಾರ ಮೃತಪಟ್ಟಿದ್ದು, ಅವರ ಸ್ಯಾಂಪಲ್ ಅನ್ನು ಪುಣೆಗೆ ಕಳುಹಿಸಿದ್ದಾರೆ. ಟೆಸ್ಟ್ ರಿಪೋರ್ಟ್ ಬರಬೇಕಿದೆ. ಇಂದು (ಮಂಗಳವಾರ) ಸಂಜೆ ಬರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. 

ಮೃತಪಟ್ಟವರಲ್ಲಿ ಒಬ್ಬರ ಕುಟುಂಬದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 9 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. 10 ತಿಂಗಳ ಮಗುವಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 75 ಜನರ ಸಂಪರ್ಕ ಪಟ್ಟಿ ಸಿದ್ಧಪಡಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ