ಯುನಿಕಾರ್ನ್ಗಳ ಮೌಲ್ಯ ಹೆಚ್ಚಳ : ನರೇಂದ್ರ ಮೋದಿ

ಭಾನುವಾರ, 29 ಮೇ 2022 (14:16 IST)
ನವದೆಹಲಿ : ಇದೇ ತಿಂಗಳ ಮೇ 5ರಂದು ದೇಶದಲ್ಲಿ ಯುನಿಕಾರ್ನ್ ಕಂಪನಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಅದರ ಒಟ್ಟು ಮೌಲ್ಯವೂ 25 ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ 89ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲ ದಿನಗಳ ಹಿಂದೆಯಷ್ಟೇ ದೇಶ ನಮಗೆಲ್ಲರಿಗೂ ಸ್ಫೂರ್ತಿ ನೀಡುವಂತಹ ಸಾಧನೆ ಮಾಡಿದೆ. ಕ್ರಿಕೆಟ್ ಮೈದಾನದಲ್ಲಿ ಶತಕದ ಬಗ್ಗೆ ಕೇಳುತ್ತಲೇ ಇರುತ್ತೀರಿ. ಇನ್ನೊಂದು ಮೈದಾನದಲ್ಲಿ ಭಾರತ ಶತಕ ಬಾರಿಸಿದೆ. ಇದು ತುಂಬಾ ವಿಶೇಷವಾಗಿದೆ ಎಂದು ಹೇಳಿದ್ದಾರೆ. 

ಯುನಿಕಾರ್ನ್ ಕಂಪನಿಗಳ ಸಂಖ್ಯೆ 100ರ ಗಡಿ ದಾಟಿದ್ದು, ಒಟ್ಟು ಮೌಲ್ಯವು 330 ಶತಕೋಟಿ ಡಾಲರ್ ಅಂದರೆ 25 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

ನಮ್ಮ ಒಟ್ಟು ಯುನಿಕಾರ್ನ್ಗಳಲ್ಲಿ 44 ಕಳೆದ ವರ್ಷ ಮಾಡಲಾಗಿತ್ತು. ಈ ವರ್ಷ 3-4 ತಿಂಗಳಲ್ಲಿ ಇನ್ನೂ 14 ಯುನಿಕಾರ್ನ್ಗಳನ್ನು ತಯಾರಿಸಲಾಗಿದೆ. ನಮ್ಮ ಸ್ಟಾರ್ಟ್ ಅಪ್ಗಳು ಕೊರೊನಾ ಅವಧಿಯಲ್ಲಿಯೂ ಸಂಪತ್ತು ಮತ್ತು ಮೌಲ್ಯಗಳಿರುವುದನ್ನು ಮುಂದುವರಿಸಿದವು. ದೇಶದಲ್ಲಿ ಸ್ಟಾರ್ಟ್ ಅಪ್ಗಳಿಗೆ ಅನುಕೂಲಕರ ವಾತಾವರಣವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ