ಗುರುವಾರ ಕೇಂದ್ರ ಸಚಿವ ಸಂಪುಟ ಪುನರ್ ರಚನೆ?

ಬುಧವಾರ, 29 ಜೂನ್ 2016 (14:05 IST)
ಪ್ರಧಾನಿ ಮೋದಿ ಗುರುವಾರ ತಮ್ಮ ಸಚಿವ ಸಂಪುಟ ಪುನರ್ ರಚಿಸುವ ಸಾಧ್ಯತೆಗಳಿವೆ. ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಇದನ್ನು ಪುಷ್ಠೀಕರಿಸಿವೆ. 

 
ರಾಷ್ಟ್ರೀಯ ಸುದ್ದಿಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ರಾಷ್ಟ್ರಪತಿ ಭವನದಲ್ಲಿರುವ ಅಶೋಕಾ ಸಭಾಂಗಣದಲ್ಲಿ ಸಮಾರಂಭಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಪಾಲ್ಗೊಳ್ಳಲಿರುವ ಗಣ್ಯರಿಗೆ ಮಧ್ಯಾಹದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. 
 
ಗುರುವಾರ ಮುಂಜಾನೆ ಟೀಗೆ ವ್ಯವಸ್ಥೆ ಮಾಡಲಾಗಿದ್ದು ಬಳಿಕ ಸಚಿವ ಸಂಪುಟ ಪುನರ್ ರಚನೆ ನಡೆಯಲಿದೆ. ಬಳಿಕ ಲಂಚ ಮುಗಿಸಿ ಸಂಜೆ ನಾಲ್ಕು ಗಂಟೆಗೆ ಕೌನ್ಸಿಲ್ ಸಭೆಯನ್ನು ಆಯೋಜಿಸಲಾಗಿದೆ. 
 
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಪ್ರಾಂತೀಯ ಮತ್ತು ಜಾತಿ ಸಮತೋಲನವನ್ನು ಕಾಯ್ದಿಟ್ಟುಕೊಂಡು ಸಚಿವ ಸಂಪುಟ ಸರ್ಜರಿ ಮಾಡಲಿದ್ದಾರೆ ಎಂದು ಊಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ