ನವದೆಹಲಿ : ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಹೋರಾಡುತ್ತಿದೆ. ಆದರೆ ವಿಪಕ್ಷಗಳು ಏನು ಮಾಡಿವೆ ಎಂಬುದನ್ನು ಹೇಳಲಿ ಎಂದು ವಿಪಕ್ಷಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ.
ದೇಶದಲ್ಲಿ ವಲಸೆ ಕಾರ್ಮಿಕರಿಗೆ ಭಾರೀ ಸಮಸ್ಯೆಯಾಗಿದೆ. ಕೊರೊನಾ ವಿರುದ್ಧ ಹೋರಾಟದ ಬಗ್ಗೆ ಬರೆಯುವಾಗ ‘ಜನತಾ ಕರ್ಪ್ಯೂ’ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ.
ಇಂದು ಬೆಳಿಗ್ಗೆ 11ಗಂಟೆಗೆ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಜನರನ್ನುದ್ದೇಶಿ ವರ್ಚುವಲ್ ರ್ಯಾಲಿ ನಡೆಸಲಿದ್ದಾರೆ. ಅಮಿತ್ ಶಾ ನಡೆಸಲಿರುವ ವಿಡಿಯೋ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.