ಮಳೆಯ ಅವಾಂತರಕ್ಕೆ ಕೇಂದ್ರ ಸಚಿವಾಲಯ ಸ್ಪಷ್ಟೀಕರಣ

ಸೋಮವಾರ, 20 ಮಾರ್ಚ್ 2023 (08:23 IST)
ನವದೆಹಲಿ : ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಮಳೆ ಅವಾಂತರ ಸೃಷ್ಠಿಯಾಗಿದ್ದು, ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾನುವಾರ ಸ್ಪಷ್ಟೀಕರಣ ನೀಡಿದೆ.
 
`ರಾಮನಗರ ಸಮೀಪದ ಗ್ರಾಮಸ್ಥರು ಚರಂಡಿಯ ಮಾರ್ಗವನ್ನು ತಡೆಹಿಡಿದಿದ್ದರು. ಆದ್ದರಿಂದ ರಸ್ತೆಯಲ್ಲಿ ನೀರು ನಿಲ್ಲುವಂತಾಗಿತ್ತು’ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಾಮನಗರದ ಬಳಿಯಿರುವ ಮಾದಾಪುರ ಗ್ರಾಮಸ್ಥರು ಹಾಗೂ ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಅಡ್ಡದಾರಿ ನಿರ್ಮಿಸಿಕೊಂಡು, ಆ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ್ದರು.

ಅದಕ್ಕಾಗಿ 3 ಮೀಟರ್ ಅಗಲಕ್ಕೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಿದ್ದರು. ಅವರು ನಿರ್ಮಿಸಿದ್ದ ಅಡ್ಡದಾರಿಯನ್ನು ಮಾರ್ಚ್ 18 ರಂದು ತೆಗೆದುಹಾಕಿದ್ದು, ಚರಂಡಿಮಾರ್ಗವನ್ನು ಮುಕ್ತಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ