ಹಿಜಬ್ ಕುರಿತು ಶೀಘ್ರದಲ್ಲಿ ವಿಚಾರಣೆ : ಸಿಜೆಐ
ಪ್ರಕರಣ ವಿಚಾರಣೆ ನಡೆಸುವಂತೆ ಶುಕ್ರವಾರ ಷರಿಯತ್ ಸಮಿತಿ ಪರವಾಗಿ ವಕೀಲರು ಮನವಿ ಮಾಡಿದರು. ಪರೀಕ್ಷೆಗೆ ಐದು ದಿನಗಳಷ್ಟೆ ಬಾಕಿಯಿದೆ. ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು. ಅದಕ್ಕಾಗಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.