ದೇಶಾದ್ಯಂತ ದನಕರುಗಳಿಗೆ ಆಧಾರ್ ರೀತಿಯ ನಂಬರ್

ಸೋಮವಾರ, 24 ಏಪ್ರಿಲ್ 2017 (21:29 IST)
ದೇಶಾದ್ಯಂತ ಗೋರಕ್ಷಕದಳದ ದಾಳಿ ಹೆಚ್ಚುತ್ತಿರುವ ಸಂದರ್ಭದಲ್ಲಿ ದನಕರುಗಳಿಗೂ ಆಧಾರ್ ರೀತಿಯ ಏಕರೂಪದ ಗುರುತಿನ ಸಂಖ್ಯೆ ನೀಡಲು ಕೇಂದ್ರಸರ್ಕಾರ ಚಿಂತನೆ ನಡೆಸಿದ್ದು, ಸುಪ್ರೀಂಕೋರ್ಟ್`ಗೆ ಪ್ರಸ್ತಾವನೆ ಸಲ್ಲಿಸಿದೆ.

ದೇಶಾದ್ಯಂತ ಜಾನುವಾರುಗಳ ಸುರಕ್ಷತೆ ಬಗ್ಗೆ ಮಾಹಿತಿ ಪಡೆಯಲು ಪ್ರತಿಯೊಂದು ಹಸುವಿಗೂ ಏಕರೂಪ ಗುರುತಿನ ಸಂಖ್ಯೆ ನೀಡಬೇಕಾದ ಅವಶ್ಯವಿದೆ ಎಂದು ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ. ಹಾಲು ಕೊಡುವ ಸಾಮರ್ಥ್ಯ ಕಳೆದುಕೊಂಡ ಬಳಿಕವೂ ಜಾನುವಾರುಗಳ ಸುರಕ್ಷತೆ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಹಸುಗಳ ಸುರಕ್ಷತೆ ಮತ್ತು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರುಗಳ ಕಳ್ಳಸಾಗಣೆ ತಡೆಗೆ ಈ ಯೋಜನೆ ಪ್ರಮುಖವಾದದ್ದು ಎಂದು ಒತ್ತಿ ಹೇಳಿದೆ. ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ಸಮಿತಿ ಮಾಡಿದ ಶಿಫಾರಸ್ಸಿನ ಆಧಾರದ ಮೇಲೆ ಈ ಪ್ರಸ್ತಾವನೆ ಇಡಲಾಗಿದೆ.

ವರದಿ ಹೇಳುವ ಪ್ರಕಾರ, ಪ್ರತೀ ಜಿಲ್ಲೆಯಲ್ಲಿ ಅನಾಥ ಹಸುಗಳಿಗಾಗಿ  500 ಹಸುಗಳ ಸಾಮರ್ಥ್ಯದ ವಸತಿ ಕೇಂದ್ರಗಳು ಇರಬೇಕು. ಇದು ಹಸುಗಳ ಕಳ್ಳಸಾಗಣೆಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ