ಸ್ವಾತಂತ್ರ್ಯೋತ್ಸವದ ಸೀರೆಗಾಗಿ ಟ್ವಿಟ್ಟರ್ ಕ್ಯಾಂಪೇನ್ ಮಾಡಿದ್ದ ಅಮೆರಿಕ ಮಹಿಳಾಧಿಕಾರಿ..!

ಮಂಗಳವಾರ, 15 ಆಗಸ್ಟ್ 2017 (11:59 IST)
ಸ್ವಾತಂತ್ರ್ಯ ದಿನೋತ್ಸವದಲ್ಲಿ ಸೀರೆಗಾಗಿ ಹುಡುಕಾಟ ನಡೆಸಿದ್ದ ಅಮೆರಿಕದ ರಾಯಭಾರ ಕಚೇರಿ ಮಹಿಳಾ ಅಧಿಕಾರಿ ಮೇರಿಕಾಯ್ ಕಾರ್ಲ್`ಸನ್`ಗೆ ಕೊನೆಗೂ ಒಂದೊಳ್ಳೆ ಸೀರೆ ಸಿಕ್ಕಿದೆ.  ಬಣ್ಣ ಬಣ್ಣದ ಸೀರೆಯುಟ್ಟು ಸ್ವಾತಂತ್ರ್ಯ ದಿನೋತ್ಸವದಲ್ಲಿ ಪಾಲ್ಗೊಂಡಿದ್ಧಾರೆ.

ಮೇರಿಕಾಯ್ ಹಲವು ದಿನಗಳಿಂದ ಟ್ವಿಟ್ಟರ್`ನಲ್ಲಿ ಸೀರೆಗಾಗಿ ಕೋರಿಕೆ ಇಟ್ಟಿದ್ದರು. ಭಾರತೀಯ ಸಂಪ್ರದಾಯದಂತೆ ಸೀರೆಯುಟ್ಟು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ, ನನಗೊಂದು ಒಳ್ಳೆಯ ಸೀರೆಯನ್ನ ಸೆಲೆಕ್ಟ್ ಮಾಡಿ ಎಂದು ಮೇರಿ ಕಾಯ್ ಹಲವು ದಿನಗಳಿಂದ ಟ್ವಿಟ್ಟರ್`ನಲ್ಲಿ ಕೇಳಿಕೊಂಡಿದ್ದರು. #SareeSearch ಹ್ಯಾಶ್ ಟ್ಯಾಗ್ ಕೊಟ್ಟು ನೆರವು ಕೇಳಿದ್ದರು. ಸೀರೆ ಆಯ್ಕೆಗೆ ಅಲೆದಾಡುತ್ತಿರುವ ಸಾಲು ಸಾಲು ಫೋಟೋ ಮತ್ತು ವಿಡಿಯೋಗಳನ್ನ ಪೋಸ್ಟ್ ಮಾಡಿದ್ದರು. ಜಮ್ದಾನಿ, ದೂಪಿಯನ್, ಕಾಂಜೀವರಮ್ ಮತ್ತು ತುಷಾರ್ ಸೀರೆಗಳಲ್ಲಿ ಯಾವುದನ್ನ ುಡಬೇಕೆಂದು ಕೇಳಿದ್ದರು. ಟ್ವಿಟ್ಟರ್ ಪೋಲ್ ಶುರು ಮಾಡಿದ್ದರು.

ಮೇರಿಕಾಯ್ ಟ್ವಿಟ್ಟರ್ ಪೋಲ್`ಗೆ 2000 ಮಂದಿ ವೊಟ್ ಮಾಡಿದ್ದರು. ಇದೀಗ, ಟ್ವಿಟರಾತಿಗಳು ನೀಡಿದ ಸಲಹೆ ಮೇರೆಗೆ ಕೊನೆಗೂ ಮೇರಿಕಾಯ್ ಸೀರೆ ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಸೀರೆಯುಟ್ಟು ಒಂದೊಳ್ಳೆ ಪೋಸ್ ಕೊಟ್ಟು ಟ್ವಿಟ್ಟರ್`ಗೆ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ