ಬಿಜ್ನೋರ್: ಪೊಲೀಸ್ ಸಿಬ್ಬಂದಿಯೊಬ್ಬರು ಸಮವಸ್ತ್ರದಲ್ಲಿ ರೈಫಲ್ ಹಿಡಿದುಕೊಂಡು ಬಿಜ್ನೋರ್ ರಸ್ತೆಯಲ್ಲಿ ಕುಡಿದು ತೂರಾಡುತ್ತಿರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜ್ನೋರ್ ಕೊತ್ವಾಲಿ ನಗರದ ಜಾಜಿ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ದೃಶ್ಯಾವಳಿ ವೈರಲ್ ಆದ ನಂತರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಮದ್ಯಪಾನ ನಶೆಯಲ್ಲಿ ನಿಂತುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ರೈಫಲ್ ಹಿಡಿದು ನಡುರಸ್ತೆಯಲ್ಲಿ ಪರದಾಡಿದ ಘಟನೆ ನಡೆದಿದೆ.
ಟ್ರಾಫಿಕ್ ಪೋಲೀಸರ ಸಮವಸ್ತ್ರವನ್ನು ಧರಿಸಿರುವ ವ್ಯಕ್ತಿ ಮತ್ತು ಖಾಕಿ ಸಮವಸ್ತ್ರದಲ್ಲಿ ಮತ್ತೊಬ್ಬ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಕಾನ್‌ಸ್ಟೆಬಲ್‌ಗೆ ರಸ್ತೆಯಿಂದ ಆಚೆ ಬರಲು ಸಹಾಯ ಮಾಡಿದ್ದಾರೆ.
ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವವರೇ ಈ ರೀತಿ ನಡೆದುಕೊಂಡರೇ ಜನಸಾಮಾನ್ಯರ ಕತೆಯೇನು ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಬಿಜ್ನೋರ್ ಪೊಲೀಸ್ ಇಲಾಖೆ ವೈರಲ್ ವಿಡಿಯೋವನ್ನು ಗಮನಿಸಿದೆ. ಎಕ್ಸ್‌ನಲ್ಲಿನ ಘಟನೆಯ ವೀಡಿಯೊಗೆ ಪ್ರತಿಕ್ರಿಯಿಸಿದ ಬಿಜ್ನೋರ್ ಪೊಲೀಸರು, ವೀಡಿಯೊದಲ್ಲಿ ಕಂಡುಬರುವ ಕಾನ್‌ಸ್ಟೆಬಲ್ ವಿರುದ್ಧ ಅಮಾನತು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯು ಸ್ಥಳೀಯರಿಂದ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಗಮನಾರ್ಹ ಗಮನ ಸೆಳೆದಿದೆ, ಕರ್ತವ್ಯದಲ್ಲಿರುವಾಗ ಶಸ್ತ್ರಸಜ್ಜಿತ ಅಧಿಕಾರಿಗಳು ಮದ್ಯಪಾನ ಮಾಡುತ್ತಿರುವ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
मामला बिजनौर से जो काफी वायरल हो रहा है
ड्यूटी पर तैनात सिपाही नशे की लत में सड़क पर लड़खड़ाते हुए दिख रहा है प्रशासन लोगों को रोकता है पर प्रशासन खुद अपने आप को नहीं रोक पाता
सिपाही और आम लोग में अंतर ही क्या है देखो....#vijnaor#Police#Trending#viralpic.twitter.com/MlHrizzbYS
— ???????????????????? ???????????????????? (@akashyadav94826) April 18, 2025