UP Encounter: 3 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪಿ ಯುಪಿ ಪೊಲೀಸರಿಂದ ಎನ್ ಕೌಂಟರ್
3 ವರ್ಷದ ಬಾಲಕಿ ಅಲಂಬಾಗ್ ನ ಮೆಟ್ರೋ ನಿಲ್ದಾಣದ ಬಳಿಯ ಸೇತುವೆ ಕೆಳಗೆ ತನ್ನ ತಾಯಿ ಜೊತೆ ಮಲಗಿದ್ದ ಮೂರು ವರ್ಷದ ಬಾಲಕಿಯನ್ನು ಆರೋಪಿ ದೀಪಕ್ ವರ್ಮಾ ಅಪಹರಿಸಿದ್ದ. ಬಳಿಕ ತನ್ನ ಸ್ಕೂಟರ್ ನಲ್ಲಿ ಕರೆದೊಯ್ದಿದ್ದ. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ತಂಡ ರಚಿಸಿ ಆರೋಪಿಗಾಗಿ ಬಲೆ ಬೀಸಿತ್ತು. ಆರೋಪಿಯನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಕಂಟೋನ್ಮೆಂಟ್ ದೇವಿ ಖೇಡಾ ಬಳಿ ಪೊಲೀಸರು ದೀಪಕ್ ನನ್ನು ಪತ್ತೆ ಮಾಡಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಹೀಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಆತನ ಜೀವ ಹೋಗಿತ್ತು. ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.