ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿದ್ದಕ್ಕೆ ಕಾರಣ ನೀಡಿದ ಯುಪಿ ಸರ್ಕಾರ
ಮಂಗಳವಾರ, 6 ಅಕ್ಟೋಬರ್ 2020 (12:08 IST)
ಲಕ್ನೋ: ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮಾಡಿದ್ದಕ್ಕೆ ಕಾರಣವೇನೆಂದು ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಮಜಾಯಿಷಿ ನೀಡಿದೆ.
ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಯೋಗಿ ಸರ್ಕಾರ ಅಂತ್ಯಸಂಸ್ಕಾರದ ಕಾರಣ ವಿವರಿಸಿದೆ. ‘ಪ್ರಕರಣ ಜಾತಿಯ ತಿರುವು ಪಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅಂತ್ಯ ಸಂಸ್ಕಾರ ಮಾಡಿದರೆ ಹಿಂಸಾಚಾರ ನಡೆಯುವ ಸಾಧ‍್ಯತೆಯಿತ್ತು. ಹೀಗಾಗಿ ಸಾರ್ವಜನಿಕರನ್ನು ದೂರವಿಟ್ಟು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಯುಪಿ ಸರ್ಕಾರ ಸಮಜಾಯಿಷಿ ನೀಡಿದೆ.