ಇತ್ತೀಚಿಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಜಮ್ಮು ಪಾಕಿಸ್ತಾನದ ಭಾಗ, ಕಾಶ್ಮೀರ ಚೀನಾದ ಭಾಗ ಎಂದು ತೋರಿಸಿತ್ತು. ಅಂತರ್ಜಾಲದಲ್ಲೂ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶದ ಕೆಲ ಭಾಗ ಹೊರತಾಗಿರುವ ಭಾರತದ ಭೂಪಟಗಳೇ ಹೆಚ್ಚಾಗಿ ಕಾಣ ಸಿಗುತ್ತವೆ. ಇವುಗಳಿಗೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಮಸೂದೆ ಜಾರಿ ತರಲು ಹೊರಟಿದೆ.