ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಭದ್ರತೆ ಮತ್ತು ರೈತರ ಕಲ್ಯಾಣ ಹಾಗೂ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ಮತ್ತು ಲೋಕಾಯುಕ್ತರನ್ನು ನೇಮಕ ಮಾಡುವವರೆಗೂ ಚಳವಳಿಯನ್ನು ಮುಂದುವರೆಸಲಾಗುವುದು. ಮೋದಿ ಸರಕಾರದ ಹೇಳಿಕೆ ಮತ್ತು ಕಾರ್ಯದಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರದಾನಿ ಮೋದಿಗೆ ಪತ್ರ ಬರೆದ ಹಜಾರೆ, ಭ್ರಷ್ಟಾಚಾರ ನಿರ್ಮೂಲನೆಗೊಳಿಸುವ ಸರಕಾರದ ಭರವಸೆ ಈಡೇರಿಲ್ಲ. ಪ್ರಧಾನಿ ಮೋದಿಯವರಿಗೆ ಮತ್ತೊಂದು ಪತ್ರ ಬರೆದು ಪ್ರತಿಭಟನೆ ಆರಂಭಿಸುವ ದಿನಾಂಕವನ್ನು ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಪ್ರಧಾನಿ ಮೋದಿ ಅಡಳಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭ್ರಷ್ಟಾಚಾರ ಎಂದಿನಂತೆ ಮುಂದುವರಿದಿದೆ. ಒಂದು ವೇಳೆ, ವಿಪಕ್ಷ ನಾಯಕ ಗೈರುಹಾಜರಿಯಲ್ಲಿ ಸಿಬಿಐ ನಿರ್ದೇಶಕರ ನೇಮಕ ಮಾಡುುವುದಾದರೇ ಲೋಕಾಪಾಲ್‌ರನ್ನು ಯಾಕೆ ನೇಮಕ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.