ಮಗನ ಮೇಲಿನ ಬೇಸರಕ್ಕೆ ಅರ್ಧ ಆಸ್ತಿಯನ್ನು ನಾಯಿಗೆ ಬರೆದ ತಂದೆ!
ಶುಕ್ರವಾರ, 1 ಜನವರಿ 2021 (09:55 IST)
ಇಂಧೋರ್: ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಅರ್ಧ ಆಸ್ತಿಯನ್ನು ತನ್ನ ಪ್ರೀತಿಯ ನಾಯಿಗೆ ವಿಲ್ ಬರೆದ ಘಟನೆ ಮಧ‍್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಮಗನ ವರ್ತನೆಯಿಂದ ಬೇಸರಗೊಂಡಿದ್ದ 50 ವರ್ಷದ ವ್ಯಕ್ತಿ ತನ್ನ ನಾಲ್ಕು ಎಕರೆ ಕೃಷಿ ಭೂಮಿಯನ್ನು ತನ್ನ ಪತ್ನಿ ಮತ್ತು ವಿಧೇಯ ನಾಯಿಗೆ ವಿಲ್ ಬರೆದಿದ್ದಾರೆ. ತನ್ನ ನಂತರ ತನ್ನ ಆಸ್ತಿ ಈ ಇಬ್ಬರಿಗೆ ಸೇರಬೇಕು. ನಾಯಿ ಸತ್ತರೆ ಅದನ್ನು ಯಾರು ನೋಡಿಕೊಳ್ಳುತ್ತಾರೋ ಅವರಿಗೆ ಆ ಆಸ್ತಿ ಸೇರಲಿದೆ ಎಂದು ವಿಲ್ ಬರೆಯಲಾಗಿದೆ.