ತಿರುವನಂತಪುರಂ: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಗಳಿಸಿದ ಈ ಮುದ್ದು ಮೊಗದ 21 ರ ಚೆಲುವೆ ಈಗ ಹೊಸ ದಾಖಲೆ ಮಾಡಿದ್ದಾರೆ.
ಆಡಳಿತಾರೂಢ ಸಿಪಿಎಂ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದ 21 ವರ್ಷ ಆರ್ಯಾ ರಾಜೇಂದ್ರನ್ ಈಗ ತಿರುವನಂತಪುರಂ ಮೇಯರ್ ಆಗಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಮೇಯರ್ ಹುದ್ದೆಗೇರಿದ ಭಾರತದ ಮೊದಲ ಮಹಿಳೆ ಎಂಬ ದಾಖಲೆ ಮಾಡಿದ್ದಾರೆ. ಸಿಪಿಎಂ ಪಕ್ಷ ಅವರ ಹೆಸರನ್ನು ಮೇಯರ್ ಸ್ಥಾನಕ್ಕೆ ಶಿಫಾರಸ್ಸು ಮಾಡಿತ್ತು. ಅಂದ ಹಾಗೆ ಆರ್ಯಾ ತಿರುವನಂತಪುರಂನ ಕಾಲೇಜು ವಿದ್ಯಾರ್ಥಿನಿ. ತಿರುವನಂತರಪುರಂನ ಮುಡವನ್ಮುಗಲ್ ವಾರ್ಡ್ ನಿಂದ ಸ್ಪರ್ಧಿಸಿ ಈಕೆ ಜಯಗಳಿಸಿದ್ದರು.