'ಪ್ರಬಲ ಪ್ರಧಾನಿ' ಎಂದು ಸಾಬೀತು ಪಡಿಸಿ

ಮಂಗಳವಾರ, 20 ಸೆಪ್ಟಂಬರ್ 2016 (16:20 IST)
ಉರಿ ಉಗ್ರ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಕಿಡಿಕಾರಿರುವ ವಿರೋಧ ಪಕ್ಷ ಕಾಂಗ್ರೆಸ್, ಅವರು ಪ್ರಬಲ ಪ್ರಧಾನಿಯಾಗಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ.  
 
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅತ್ಯಂತ ದುರ್ಬಲ. ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಆರೋಪಿಸಿದ್ದನ್ನು ಕೆದಕಿರುವ ಕಾಂಗ್ರೆಸ್ ಈ ರೀತಿ ಹೇಳಿದೆ. 
 
"ಪ್ರಧಾನಿಯವರೇ ನೀವು ದುರ್ಬಲರಲ್ಲವೇ? ನೀವು ಪ್ರಬಲರಾಗಿದ್ದರೆ ದೇಶ ಅದಕ್ಕೆ ಸಾಕ್ಷ್ಯವೇನೆಂದು ಕೇಳುತ್ತದೆ", ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಪ್ರಧಾನಿ ಮೋದಿಯನ್ನು ಕೆಣಕಿದ್ದಾರೆ. 
 
ಜೈಷ್-ಇ-ಮೊಹಮ್ಮದ್ ಉರಿ ದಾಳಿಯ ರೂವಾರಿ ಎಂಬುದು ಸತ್ಯ. ಇದು ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಕಂದಹಾರ್ ಹೈಜಾಕ್‌ನ್ನು ಬೇರೆ ರೀತಿಯಲ್ಲಿ ನಿರ್ಹಹಿಸಬೇಕಿತ್ತೇ? ಎಂಬುದು ಆ ಸವಾಲು. ಆಗಲೇ ಜೈಷ್-ಇ-ಮೊಹಮ್ಮದ್ ನಾಯಕ ಮಸೂದ್ ಅಜರ್‌ನನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ತಿವಾರಿ ಹೇಳಿದ್ದಾರೆ. 
 
1999ರಲ್ಲಿ ಇಂಡಿಯನ್ ಏರ್‌ನೈಲ್ಸ್ ಅಪಹರಣವಾದಾಗ ಸುಮಾರು 200 ಪ್ರಯಾಣಿಕರ ಜೀವ ಕಾಪಾಡಲು ಅಪಹರಣಕಾರರ ಬೇಡಿಕೆಯಂತೆ ಜೆಇಎಮ್ ಸ್ಥಾಪಕ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ