ಉತ್ತರ ಪ್ರದೇಶ ಚುನಾವಣೆ: ನಾಲ್ಕನೇ ಹಂತದ ಮತದಾನ ಆರಂಭ

ಗುರುವಾರ, 23 ಫೆಬ್ರವರಿ 2017 (10:14 IST)
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಭಾಗವಾಗಿ ಇಂದು ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನ ನಡೆಯುತ್ತಿದೆ. 

12 ಜಿಲ್ಲೆಗಳ 53 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು 689 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 
 
ಹಿಂದುಳಿದ ಜಿಲ್ಲೆ ಬುಂದೇಲಖಂಡ, ನೆಹರು-ಗಾಂಧಿ ಮನೆತನದ ಭದ್ರಕೋಟೆ ರಾಯ್ ಬರೇಲಿ, ಲಲಿತ್ ಪುರ್, ಮಹೋಬಾ, ಬಂದಾ, ಹಮಿರ್ಪುರ್, ಚಿತ್ರಕೂಟ್, ಕೌಶಂಬಿ, ಅಲಹಾಬಾದ್, ಜಲೌನ್, ಝಾನ್ಸಿ ಜಿಲ್ಲೆಗಳಳ್ಲಿ ಮತದಾನ ನಡೆಯುತ್ತಿದೆ. 
 
1998ರಿಂದೀಚೆಗೆ ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ತಾವು ಪ್ರತಿನಿಧಿಸುವ ಸಂಸದೀಯ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿಲ್ಲ.
 
ಶಾಂತಿಪೂರ್ಣ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥ ಟಿ. ವೆಂಕಟೇಶ್‌ ಹೇಳಿದ್ದಾರೆ. 1,84, 82 166 ಜನ ಮತದಾನದ ಹಕ್ಕನ್ನು ಹೊಂದಿದ್ದು, ಇದರಲ್ಲಿ 1,00,31,093 ಜನ ಪುರುಷ ಮತದಾರರು ಹಾಗೂ 84,50,039 ಜನ ಮಹಿಳಾ ಮತದಾರರಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ