ಹಿಂಸಾಚಾರದ ವರದಿ ಸಲ್ಲಿಸಿದ ಉತ್ತರಪ್ರದೇಶ

ಶುಕ್ರವಾರ, 8 ಅಕ್ಟೋಬರ್ 2021 (17:15 IST)
ನವದೆಹಲಿ: ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ತನಿಖೆ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರ ವಸ್ತುಸ್ಥಿತಿ ವರದಿ ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್, "ಅತ್ಯುನ್ನತ ಪೊಲೀಸ್ ಅಧಿಕಾರಿ ಪ್ರಕರಣದ ಸಾಕ್ಷ್ಯವನ್ನು ರಕ್ಷಿಸಬೇಕು.

ಆರೋಪಿಯನ್ನು ತಕ್ಷಣವೇ ಏಕೆ ಬಂಧಿಸಲಿಲ್ಲ? ಅವರನ್ನು ಇತರ ನಾಗರಿಕರಂತೆ ಏಕೆ ಪರಿಗಣಿಸುವುದಿಲ್ಲ? ಸ್ಥಳೀಯ ಪೊಲೀಸರು ಈ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದು ಹೇಳಿ, ನ್ಯಾಯಾಲಯವು ರಜೆಯ ನಂತರ ಅಂದರೆ ಅಕ್ಟೋಬರ್ 20ರ ಬೆಳಿಗ್ಗೆ 10: 30 ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ, ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಗಿದ್ದು, ಬೆಳಿಗ್ಗೆ 10.30 ರವರೆಗೆ ಪೊಲೀಸ್ ಠಾಣೆಗೆ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.
ತನಿಖಾ ತಂಡದ ಮುಖ್ಯಸ್ಥರಾಗಿರುವ ಇನ್ಸ್ಪೆಕ್ಟರ್ ಜನರಲ್ (ಪ್ರಧಾನ ಕಚೇರಿ) ಉಪೇಂದ್ರ ಅಗರ್ವಾಲ್ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದಿದ್ದಾರೆ ಎಂದು ಅವರು ಹೇಳಿದರು. "ಆಶಿಶ್ ಮಿಶ್ರಾ ಇಲ್ಲಿಯವರೆಗೆ ಬಂದಿಲ್ಲ" ಎಂದು ಅಧಿಕೃತ ಮೂಲವು ಬೆಳಿಗ್ಗೆ 10.30 ರ ಸುಮಾರಿಗೆ ತಿಳಿಸಿದೆ. ಪ್ರಕರಣದ ಸಂಬಂಧ ಗುರುವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ನಂತರ, ಪೊಲೀಸರು ಆತನ ಮನೆಯ ಹೊರಗೆ ನೋಟಿಸ್ ಅಂಟಿಸಿ, ಎಂಟು ಜೀವಗಳನ್ನು ಬಲಿ ತೆಗೆದುಕೊಂಡ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಆಶಿಶ್ ಅವರ ಸಹೋದರ, ಅಶಿಶ್ ಇಂದು ತನಿಖೆಗೆ ಹಾಜರಾಗುತ್ತಾರೆ ಮತ್ತು ಅವರು ಲಖಿಂಪುರದಲ್ಲಿಯೇ ಇದ್ದಾರೆ ಎಂದು ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ