ಚೆನ್ನೈ ಕರಾವಳಿ ದಾಟಿ ಆಂಧ್ರದತ್ತ ವಾರ್ಧಾ: ತಗ್ಗಿದ ಗಾಳಿ ವೇಗ

ಸೋಮವಾರ, 12 ಡಿಸೆಂಬರ್ 2016 (16:17 IST)
ವಾರ್ಧಾ ಚಂಡಮಾರುತ ತಮಿಳುನಾಡು ಕರಾವಳಿ ತೀರವನ್ನು ದಾಟಿ ಆಂಧ್ರದ ಕರಾವಳಿಯತ್ತ ಸಾಗಿದ್ದು ಗಾಳಿಯ ವೇಗ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಗಾಳಿಯ ವೇಗ ತಗ್ಗುತ್ತಿದ್ದಂತೆ ವಾಹನಗಳು ನಿಧಾನವಾಗಿ ರಸ್ತೆಗಿಳಿಯುತ್ತಿವೆ.


ಇಲ್ಲಿಯವರೆಗೆ 110ಕೀಲೋಮೀಟರ್ ವೇಗದಲ್ಲಿ ಬೀಸುತ್ತಿದ್ದ ಗಾಳಿ, ಆಂಧ್ರದತ್ತ ಸಾಗುತ್ತಿದ್ದಂತೆ 40ಕೀಲೋಮೀಟರ್‌ಗೆ ತಗ್ಗಿದೆ. 
 
ಮುಂದಿನ 12 ಗಂಟೆ ಗಾಳಿಯ ವೇಗ ದಿಢೀರ್ ಹೆಚ್ಚುವ  ಸಾಧ್ಯತೆಗಳಿದ್ದು ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ. 
 
ಮುಂಜಾನೆಯಿಂದ ಅಬ್ಬರಿಸಿದ ಮಳೆ-ಗಾಳಿಯ ಪರಿಣಾಮ ಚೆನ್ನೈ ಮಹಾನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ 4,000 ಮರಗಳು ಧರೆಗುರುಳಿವೆ. ಮರಗಳಡಿ ನಿಲ್ಲಿಸಲಾಗಿದ್ದ ಸಾವಿರಾರು ವಾಹನಗಳು ಜಖಂಗೊಂಡಿವೆ. ಗಿಂಡಿ ಕೈಗಾರಿಕಾ ಪ್ರದೇಶ ಸೇರಿದಂತೆ ಚೆನ್ನೈನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನೂರಾರು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ