ಉಪರಾಷ್ಟ್ರಪತಿ ಚುನಾವಣೆ ಇಂದು: ಗೆಲ್ಲುವವರು ಇವರೇ ಎನ್ನುತ್ತಿದೆ ಅಂಕಿ ಅಂಶ

Krishnaveni K

ಮಂಗಳವಾರ, 9 ಸೆಪ್ಟಂಬರ್ 2025 (09:21 IST)
ನವದೆಹಲಿ: ಇಂದು ಭಾರತದ ನೂತನ ಉಪರಾಷ್ಟ್ರಪತಿ ಆಯ್ಕೆ ನಡೆಸಲು ಮತದಾನ ಪ್ರಕ್ರಿಯೆ ನಡೆಯಲಿದೆ. ಅಂಕಿ ಅಂಶಗಳ ಪ್ರಕಾರ ಇಂದು ಗೆಲ್ಲುವ ಅಭ್ಯರ್ಥಿ ಇವರೇ.

ಜಗದೀಪ್ ಧನ್ಕರ್ ರಾಜೀನಾಮೆ ಬಳಿಕ ನೂತನ ಉಪರಾಷ್ಟ್ರಪತಿಗಳ ಆಯ್ಕೆ ನಡೆಯುತ್ತಿದೆ. ಎನ್ ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಕಣದಲ್ಲಿದ್ದರೆ, ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಬಿ ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಸದರು ಮತದಾನ ಮಾಡಿ ಉಪರಾಷ್ಟ್ರಪತಿಗಳ ಆಯ್ಕೆ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪೂರ್ತಿಯಾಗಿ ಗೆಲುವು ಯಾರದ್ದು ಎಂದು ಗೊತ್ತಾಗಲಿದೆ. ಮೂಲಗಳ ಪ್ರಕಾರ ಎನ್ ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚು.

ಒಟ್ಟು ಮತದಾರರ ಸಂಖ್ಯೆಯಿರುವುದು 781. ಈ ಪೈಕಿ 11 ಮಂದಿ ಮತದಾನದಿಂದ ಹೊರಗುಳಿದಿದ್ದಾರೆ. ಎನ್ ಡಿಎ ಕೂಟದ ಬಳಿಯೇ 427 ಮತಗಳಿವೆ. ಆದರೆ ಇಂಡಿಯಾ ಒಕ್ಕೂಟದ ಬಳಿ 315 ಮತಗಳಿವೆಯಷ್ಟೇ. ಬಹುಮತಕ್ಕೆ 386 ಮತಗಳು ಬೇಕು. ಹೀಗಾಗಿ ಈ ಅಂಕಿ ಅಂಶದ ಪ್ರಕಾರ ಎನ್ ಡಿಎ ಅಭ್ಯರ್ಥಿಯೇ ಗೆಲ್ಲುವುದು ಬಹುತೇಕ ನಿಶ್ಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ