ಬಾಬಾಗೆ ಕೇವಲ 10 ವರ್ಷ ಸಜೆ: ಮೇಲ್ಮನವಿ ಸಲ್ಲಿಸಲಿರುವ ಸಂತ್ರಸ್ಥೆ

ಸೋಮವಾರ, 28 ಆಗಸ್ಟ್ 2017 (16:37 IST)
ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್‌ಗೆ ಸಿಬಿಐ ಕೋರ್ಟ್ ನೀಡಿದ 10 ವರ್ಷಗಳ ಶಿಕ್ಷೆ ತೃಪ್ತಿ ತಂದಿಲ್ಲ. ಹೆಚ್ಚಿನ ಶಿಕ್ಷೆ ನೀಡುವಂತೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾಳೆ
ದೋಷಿ ಬಾಬಾ ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ ವಿಧಿಸುವುದು ಸೂಕ್ತ. ಕೇವಲ 10 ವರ್ಷ ಶಿಕ್ಷೆ ವಿಧಿಸಿರುವುದು ಸಮಾಧಾನ ತಂದಿಲ್ಲ ಕೆಲ ಮಹಿಳಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
 
ಇಬ್ಬರು ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್, ಬಾಬಾ ರಾಮ್ ರಹೀಮ್‌ಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ 65 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.
 
ಸಿಬಿಐಕೋರ್ಟ್‌ ನ್ಯಾಯಮೂರ್ತಿ ಜಗದೀಪ್ ಸಿಂಗ್ ಇಂದು ತೀರ್ಪು ನೀಡಿ, ಬಾಬಾ ರಾಮ್ ರಹೀಮ್‌ಗೆ ಯಾವುದೇ ವಿಶೇಷ ಸೌಲಭ್ಯ ನೀಡುವಂತಿಲ್ಲ. ಸಾಮಾನ್ಯ ಕೈದಿಯಂತೆ ನೋಡಬೇಕು. ಜೈಲಿನ ಆಹಾರವನ್ನೇ ಸೇವಿಸಬೇಕು ಎಂದು ಜೈಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ