ಆರೋಪಿಯ ಮನೆ ಅಂಗಳದಲ್ಲೇ ಕೊಲೆಯಾದ ವ್ಯಕ್ತಿಯ ಮೃತದೇಹ ಹೂತು ಹಾಕಿದ ಗ್ರಾಮಸ್ಥರು!
ಬಿಹಾರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಲಿಕ್ಕರ್ ಸ್ಮಗ್ಲರ್ ಗೆ ಕಂಟ್ರಿ ಸಾರಾಯಿ ಕೊಡುವಂತೆ ಸಂತ್ರಸ್ತ ಕೇಳಿದ್ದ. ಆದರೆ ಆತ ಕೊಡದೇ ಹೋದಾಗ ಇಬ್ಬರ ನಡುವೆ ಜಗಳವಾಗಿದೆ. ಇದೇ ಸಿಟ್ಟಿನಲ್ಲಿ ಸ್ಮಗ್ಲರ್ ಗ್ರಾಹಕನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಆರೋಪಿಯ ಮನೆ ಮೇಲೆ ದಾಳಿ ಮಾಡಿದ್ದಲ್ಲದೆ, ಸಂತ್ರಸ್ತನ ಮೃತದೇಹವನ್ನು ಮನೆಯ ಅಂಗಳದಲ್ಲೇ ಮಣ್ಣು ಮಾಡಿದ್ದಾರೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.