ಅಪಹರಣವಾದಂತೆ ನಾಟಕವಾಡಿ ಮನೆಯವರಿಂದಲೇ ಹಣ ಪೀಕಲು ಮುಂದಾದ ಯುವಕ
ಪೋಷಕರು ಯುವಕನಿಗೆ ಕಾಲೇಜು ಫೀಸ್ ಕಟ್ಟಲು 30 ಸಾವಿರ ರೂ. ನೀಡಿದ್ದರು. ಆದರೆ ಆನ್ ಲೈನ್ ಗೇಮ್ ಗೀಳು ಹಚ್ಚಿಕೊಂಡಿದ್ದ ಯುವಕ ಅದನ್ನು ಗೇಮ್ ಆಡುತ್ತಾ ಕಳೆದುಕೊಂಡಿದ್ದ.
ಬಳಿಕ ಹಣಕ್ಕಾಗಿ ಮನೆಯವರಿಗೆ ಕರೆ ಮಾಡಿ ತಾನು ಅಪಹರಣವಾಗಿದ್ದೇನೆ. 1 ಲಕ್ಷ ರೂ. ನೀಡದೇ ಇದ್ದರೆ ಅಪಹರಣಕಾರರು ನನ್ನನ್ನು ಕೊಲೆ ಮಾಡುತ್ತಾರೆ ಎಂದು ನಾಟಕವಾಡಿದ್ದ. ಬಳಿಕ ಯುವಕನ ತಂದೆ ಪೊಲೀಸ್ ಠಾಣೆಗೆ ತೆರಳಿ ಮಗನನ್ನು ಹುಡುಕಿಕೊಡಲು ನೆರವು ಕೇಳಿದ್ದರು. ಆತನ ಫೋನ್ ಜಾಡು ಹಿಡಿದು ಪತ್ತೆ ಮಾಡಿದಾಗ ನಿಜ ಘಟನೆಯನ್ನು ಬಾಯ್ಬಿಟ್ಟಿದ್ದಾನೆ.