ಬಂಗಾಳದಲ್ಲಿ ಮತ್ತೆ ಹಿಂಸಾಚಾರ!

ಸೋಮವಾರ, 13 ಜೂನ್ 2022 (13:09 IST)
ಕೋಲ್ಕತಾ : ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ಸಂಬಂಧ ಭಾನುವಾರವೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ.

ನಾಡಿಯಾ ಜಿಲ್ಲೆಯ ಬೇಥುಅಡಹರಿ ನಗರದ ರೈಲ್ವೆ ನಿಲ್ದಾಣದ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿದೆ. ಈ ವೇಳೆ ನಿಲ್ದಾಣ ಮತ್ತು ರೈಲೊಂದಕ್ಕೆ ಬೆಂಕಿ ಹಚ್ಚುವ ಯತ್ನ ನಡೆದಿದೆ. ಅಲ್ಲದೆ ಕಲ್ಲು ತೂರಾಟವನ್ನೂ ನಡೆಸಲಾಗಿದೆ. ಘಟನೆಯಲ್ಲಿ ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ.

ಈ ನಡುವೆ ಕಳೆದ 2 ದಿನಗಳಿಂದ ಭಾರೀ ಹಿಂಸಾಚಾರ ನಡೆದಿದ್ದ ಹೌರಾದಲ್ಲಿ ಭಾನುವಾರ ಶಾಂತಿ ನೆಲೆಸಿದೆ. ಗಲಭೆಯ ಕಾರಣದಿಂದಾಗಿ ಹೇರಲಾಗಿದ್ದ ಸೆಕ್ಷನ್ 144 ಸಿಆರ್ಪಿಸಿ ಹಾಗೂ ಇಂಟರ್ನೆಟ್ ಸ್ಥಗಿತ ಮುಂದುವರೆಸಿದ ಹಿನ್ನೆಲೆಯಲ್ಲಿ ಮುರ್ಷಿದಾಬಾದ್, ಬೆಲ್ದಂಗಾ, ರೇಜಿನಗರ, ಶಕ್ತಿಪುರ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲೂ ಶಾಂತಿ ನೆಲೆಸಿದೆ.

ಕಳೆದ 2 ದಿನಗಳ ಕಾಲ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸುಮಾರು 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಶಾಂತಿ ವಾತಾವರಣದ ನಡುವೆಯೂ ಮತ್ತೆ ದಂಗೆ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲರ್ಚ್ ಘೋಷಿಸಲಾಗಿದ್ದು, ಭಾರೀ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ