ಜೆರುಸಲೇಮ್ ಮಸೀದಿಯಲ್ಲಿ ಹಿಂಸಾಚಾರ !
ಶನಿವಾರ, 16 ಏಪ್ರಿಲ್ 2022 (13:40 IST)
ಜೆರುಸಲೇಮ್ : ಶುಕ್ರವಾರ ಜೆರುಸಲೇಮ್ನ ಅಲ್-ಅಕ್ಸಾ ಮಸೀದಿ ಆವರಣದಲ್ಲಿ ಪ್ಯಾಲಸ್ಟೈನ್ ಮಂದಿ ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು,
ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ಟಿನ್ ಸಂಘರ್ಷ ತಲೆಮಾರುಗಳಷ್ಟು ಹಳೆಯ ಇತಿಹಾಸ ಹೊಂದಿದೆ.
ಶುಕ್ರವಾರ ನಡೆದ ಘಟನೆಯಿಂದಾಗಿ ಹಿಂಸಾಚಾರ ಇನ್ನೂ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.
ಅಲ್-ಅಕ್ಸಾ ಮಸೀದಿ ಆವರಣ ಪೂರ್ವ ಜೆರುಸೆಲೇಮ್ನ ಓಲ್ಡ್ ಸಿಟಿ ಪ್ರದೇಶದಲ್ಲಿದೆ. ಇದನ್ನು ಇಸ್ರೇಲ್ 1967ರಲ್ಲಿ ಯುದ್ಧದಲ್ಲಿ ವಶಪಡಿಸಿಕೊಂಡಿದೆ.
ಕಳೆದ 2 ವಾರಗಳ ಹಿಂದೆ ನಡೆದ ಇಸ್ರೇಲ್ನ ಅರಬ್ ಸ್ಟ್ರೀಟ್ ದಾಳಿಯ ಬಳಿಕ ದೇಶಾದ್ಯಂತ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದೆ.