ಜೈಲಿಗೆ ಹಾಕಿದ್ರೂ ಸರಿಯೇ ನಮಗೆ ಭಾರತವೇ ಬೇಕು ಎಂದ ಬಾಂಗ್ಲಾದೇಶ ಹಿಂದೂಗಳು

Krishnaveni K

ಸೋಮವಾರ, 9 ಡಿಸೆಂಬರ್ 2024 (09:44 IST)
ತ್ರಿಪುರಾ: ನಮ್ಮನ್ನು ಜೈಲಿಗೆ ಹಾಕಿದರೂ ಸರಿ, ನಾವು ಭಾರತ ಬಿಟ್ಟು ಹೋಗಲ್ಲ. ಹೀಗಂತ ತ್ರಿಪುರಾದಲ್ಲಿ ಬಂಧಿತರಾದ ಬಾಂಗ್ಲಾದೇಶ ಹಿಂದೂಗಳು ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ನಂತರ ನಿರಂತರವಾಗಿ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಲೇ ಇದೆ. ಇತ್ತೀಚೆಗಂತೂ ಹಿಂದೂಗಳ ಮೇಲೆ ಇನ್ನಿಲ್ಲದಂತೆ ಹಿಂಸಾಚಾರ, ಕೊಲೆ, ಅತ್ಯಾಚಾರ ನಡೆಯುತ್ತಲೇ ಇದೆ. ಅಲ್ಪ ಸಂಖ್ಯಾತ ಹಿಂದೂಗಳಿಗೆ ಅಲ್ಲಿನ ಸರ್ಕಾರ ಯಾವುದೇ ರಕ್ಷಣೆ ನೀಡುತ್ತಿಲ್ಲ.

ಹೀಗಾಗಿ ಬಾಂಗ್ಲಾದೇಶದಿಂದ ಕೆಲವು ಹಿಂದೂಗಳು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳುತ್ತಿದ್ದಾರೆ. ಇದೇ ರೀತಿ ಭಾರತದ ತ್ರಿಪುರಾಗೆ ಬಂದು ಸೇರಿಕೊಂಡ ಮೂವರು ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಲಾಗಿದೆ. ಇವರು ಅಲ್ಲಿನ ದುಸ್ಥಿತಿ ಬಗ್ಗೆ ವಿವರಣೆ ನೀಡಿದ್ದು, ನಾವು ಯಾವುದೇ ಕಾರಣಕ್ಕೂ ಮರಳಿ ಬಾಂಗ್ಲಾದೇಶಕ್ಕೆ ಹೋಗಲ್ಲ. ನಮ್ಮನ್ನು ನೀವು ಜೈಲಿಗೆ ಹಾಕಿದರೂ ಸರಿಯೇ ಎಂದಿದ್ದಾರೆ.

ಅಲ್ಲಿ ನಾವು ಸುರಕ್ಷಿತವಾಗಿಲ್ಲ, ನಮ್ಮನ್ನು ಯಾವ ಕ್ಷಣದಲ್ಲಿ ಬೇಕಾದರೂ ಕೊಲೆ ಮಾಡಬಹುದು. ನಮ್ಮ ಮಹಿಳೆಯರು ಸುರಕ್ಷಿತವಾಗಿಲ್ಲ. ಹೀಗಾಗಿ ನಾವು ಕಾಡು ಮಾರ್ಗವಾಗಿ ಕಷ್ಟಪಟ್ಟು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇವೆ. ಇನ್ನು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ನಮ್ಮಂತೆ ಅನೇಕ ಹಿಂದೂಗಳು ಭಾರತಕ್ಕೆ ಓಡಿ ಹೋಗಲು ಅಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವರಿಗೆ ಅದಕ್ಕೂ ಧೈರ್ಯ ಸಾಲುತ್ತಿಲ್ಲ ಎಂದು ಬಂಧಿತರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ