ರೈಲು ಹಳಿ ಮೇಲೆ ಮಲಗಿ ಯುವಕನ ರೀಲ್ಸ್ ಹುಚ್ಚಾಟ: ವಿಡಿಯೋ ನೋಡಿ

Krishnaveni K

ಸೋಮವಾರ, 7 ಜುಲೈ 2025 (12:12 IST)
Photo Credit: X
ಭುವನೇಶ್ವರ: ರೈಲು ಹಳಿಗಳ ಮೇಲೆ ಮಲಗಿ ರೀಲ್ಸ್ ಮಾಡುವ ಹುಚ್ಚಾಟ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೇ ರೀತಿ ಭುವನೇಶ್ವರ್ ನಲ್ಲಿ ಯುವಕನೊಬ್ಬ ರೈಲು ಹಳಿ ಮೇಲೆ ಮಲಗಿದ್ದು ಆತನ ಮೇಲೆ ರೈಲು ಹೋಗುವ ಭಯಾನಕ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪ್ರಾಪ್ತ ಯುವಕನೊಬ್ಬ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಈ ಹುಚ್ಚಾಟ ಮಾಡಿದ್ದಾನೆ. ಅದೃಷ್ಟವಶಾತ್ ಆತ ಬದುಕುಳಿದಿದ್ದಾನೆ. ಆದರೆ ರೈಲು ಹಳಿಗಳ ಮೇಲೆ ಹುಚ್ಚಾಟ ಮಾಡಿದ ಯುವಕ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ವೈರಲ್ ಆಗಬಹುದು ಎಂಬ ಕಾರಣಕ್ಕೆ ಈ ರೀಲ್ಸ್ ಮಾಡಲು ನನ್ನ ಸ್ನೇಹಿತರು ಸಲಹೆ ನೀಡಿದ್ದರು. ಹೀಗಾಗಿ ಭಯವಾದರೂ ರೀಲ್ಸ್ ಮಾಡಲು ಮುಂದಾದೆ. ರೈಲು ಹಾದು ಹೋಗುವಾಗ ನಾನು ಬದುಕಲ್ಲ ಎನಿಸಿ ಭಯವಾಗಿತ್ತು ಎಂದು ಯುವಕ ಹೇಳಿಕೊಂಡಿದ್ದಾನೆ.

ಈ ರೀತಿ ಅನೇಕರು ರೈಲು ಹಳಿಗಳ ಮೇಲೆ ರೀಲ್ಸ್ ಮಾಡಲು ಹೋಗಿ ಅರೆಸ್ಟ್ ಆದ ಘಟನೆಗಳಿವೆ. ಕೆಲವು ಸಂದರ್ಭದಲ್ಲಿ ಹಳಿಗಳ ಮೇಲೆ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ನಿದರ್ಶನಗಳೂ ಇವೆ.

आज के बच्चे— Homework से डरते हैं ????,पर ट्रेन से नहीं ????????दिमाग offline....कैमरा online !#Madness #Bachpan #Boudh #Odisha #Reel #Like #AI #Train #Life #Safe #GRP #Entertainment #Risk #child #Stunts #Railway #viral pic.twitter.com/uSFAE0VwWG

— Sanjeev (@wing4destiny) July 6, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ