ಪೊರಕೆ ಹಿಡಿದ ವಿರಾಟ್ ಕೊಹ್ಲಿಗೆ ಮೋದಿ ಶ್ಲಾಘನೆ

ಶನಿವಾರ, 8 ಅಕ್ಟೋಬರ್ 2016 (09:43 IST)
ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ, ರನ್ ಮಶೀನ್ ವಿರಾಟ್ ಕೊಹ್ಲಿ , ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಫಾಲೋ ಮಾಡ್ತಿದ್ದಾರಂತೆ. ಮೋದಿ ಅವರ ಮಹಾತ್ವಾಕಾಂಕ್ಷೆಯ ಅಭಿಯಾನ ಸ್ವಚ್ಛ ಭಾರತಕ್ಕೆ ಕೈ ಜೋಡಿಸಿರುವ ಅವರು ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದಾರೆ. ಪ್ರಾಕ್ಟೀಸ್ ಮಾಡುವುದನ್ನು ಬಿಟ್ಟು ಇಂದೋರ್ ಸ್ಟೇಡಿಯಂ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ ಅವರು. 
ಹೌದು, ನ್ಯೂಜಿಲೆಂಡ್ ವಿರುದ್ಧದ ಮೂರನೆಯ ಟೆಸ್ಟ್‌ಗೆ ಎಲ್ಲಾ ಆಟಗಾರರು ಪ್ರಾಕ್ಟೀಸ್ ನಡೆಸುತ್ತಿದ್ದರೆ ಕೊಹ್ಲಿ ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸ, ಬಾಟಲಿಗಳನ್ನು ಎತ್ತಿ ಕಸದ ಡಬ್ಬಿಗೆ ಹಾಕುವಲ್ಲಿ ಮಗ್ನರಾಗಿದ್ದರು. 
 
ಇದಕ್ಕೂ ಮುನ್ನ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕೂಡ ಕೊಹ್ಲಿ ಟೀಮ್ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿತ್ತು. ಬಿಸಿಸಿಐ ಬಿಗ್ ಬಾಸ್‌ಗಳು ಕೂಡ ಅವರಿಗೆ ಸಾಥ್ ಕೊಟ್ಟಿದ್ದರು.
 
ಪ್ರಧಾನಿ ಅವರ ಮೇಲೆ ಅಪಾರ ಅಭಿಮಾನ ಹೊಂದಿರುವ ಕೊಹ್ಲಿ, ಮೋದಿ ಆತ್ಮನಂಬಿಕೆ. ಅವರೊಬ್ಬ ಜನಪ್ರಿಯ ರಾಜಕಾರಣಿ. ಅವರ ಆದರ್ಶಗಳೆಂದರೆ ನನಗಿಷ್ಟ ಎನ್ನುತ್ತಾರೆ ಕೊಹ್ಲಿ.
 
ವಿರಾಟ್ ಕೊಹ್ಲಿ ಈ ಕಾರ್ಯವನ್ನು ಹೊಗಳಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಿಮ್ಮ ಈ ಕಾರ್ಯ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 
 
ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ ಧನ್ಯವಾದಗಳು ಸರ್, ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಪ್ರೇರಣೆ ನೀವು ಎಂದು ಮರು ಟ್ವೀಟ್ ಪ್ರಕಟಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ