ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ ಎಂದ ಚೀನಾ!

ಶನಿವಾರ, 30 ಏಪ್ರಿಲ್ 2022 (09:10 IST)
ಬೀಜಿಂಗ್ : ಚೀನಾದ ಪ್ರಜೆಗಳಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಅಮಾನತುಗೊಳಿಸಿ ಬಿಸಿ ಮುಟ್ಟಿಸಿದ ಬಳಿಕ ಈಗ ಭಾರತೀಯ ವಿದ್ಯಾರ್ಥಿಗಳಿಗೆ ದೇಶಕ್ಕೆ ಮರಳಲು ಚೀನಾ ಅನುಮತಿ ನೀಡಿದೆ.
 
ಕೋವಿಡ್ ಕಾರಣದಿಂದಾಗಿ ಬೀಜಿಂಗ್ ವೀಸಾ ಹಾಗೂ ವಿಮಾನ ನಿರ್ಬಂಧಗಳನ್ನು ವಿಧಿಸಿತ್ತು. ಇದೀಗ 2 ವರ್ಷಗಳ ಬಳಿಕ ಚೀನಾದಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಚೀನಾ ಮರಳುವಂತೆ ಅನುಮತಿ ನೀಡಿದೆ. 

ಶುಕ್ರವಾರ ಚೀನಾ ವಿದ್ಯಾರ್ಥಿಗಳಿಗೆ ಮರಳಲು ಅನುಮತಿ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯಾನ್, ಚೀನಾದಲ್ಲಿ ಅಧ್ಯಯನಕ್ಕಾಗಿ ಭಾರತದಿಂದ ಮರಳುವ ವಿದ್ಯಾರ್ಥಿಗಳಿಗೆ ಚೀನಾ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.

ನಾವು ಇತರ ದೇಶಗಳ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೂ ಚೀನಾಗೆ ಹಿಂದಿರುಗುವ ಕಾರ್ಯವಿಧಾನವನ್ನು ತಿಳಿಸಿದ್ದೇವೆ ಎಂದರು. ಭಾರತೀಯ ವಿದ್ಯಾರ್ಥಿಗಳನ್ನು ಚೀನಾಗೆ ಕರೆಸಿಕೊಳ್ಳುವ ಕೆಲಸ ಈಗಾಗಲೇ ಪ್ರಾರಂಭಿಸಲಾಗಿದೆ. ಇದೀಗ ಭಾರತ ಚೀನಾಗೆ ಹಿಂದಿರುಗಬೇಕಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ನೀಡುವುದು ಮಾತ್ರವೇ ಬಾಕಿ ಉಳಿದಿದೆ ಎಂದರು.

ಈ ಹಿಂದಿನ ವರದಿಗಳ ಪ್ರಕಾರ 2019ರಲ್ಲಿ ಕೊರೋನಾ ವೈರಸ್ ಪ್ರಾರಂಭವಾದಾಗ 23,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಬಂದಿದ್ದರು. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳೇ ಇದ್ದರು. ವೈರಸ್ ಹರಡುವಿಕೆ ತಡೆಯಲು ಚೀನಾ ವಿಧಿಸಿದ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳು ಚೀನಾ ಮರಳಲು ಸಾಧ್ಯವಾಗಿರಲಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ