ಒಮಾನ್ ರಕ್ಷಣಾ ಅಧಿಕಾರಿಗಳ ಭೇಟಿ

ಭಾನುವಾರ, 30 ಜನವರಿ 2022 (13:42 IST)
ನವದೆಹಲಿ : ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಒಮಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಾಸರ್ ಅಲ್ ಝಾಬಿ ಸೇರಿದಂತೆ ಹಲವಾರು ಉನ್ನತ ಮಟ್ಟದ ರಕ್ಷಣಾ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಭೇಟಿ ಬಳಿಕ ಭಾರತ ಮತ್ತು ಒಮಾನ್ ರಕ್ಷಣಾ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಜಂಟಿ ಮಿಲಿಟರಿ ಸಹಕಾರ ಸಮಿತಿ(ಜೆಎಂಎಂಸಿ) ಭಾರತ ಮತ್ತು ಒಮಾನ್ ನಡುವಿನ ರಕ್ಷಣಾ ವೇದಿಕೆಯಾಗಿದೆ.

ಕೊನೆಯ (ಜೆಎಂಸಿಸಿ) 2018 ರಲ್ಲಿ ಒಮಾನ್ನಲ್ಲಿ ನಡೆದಿತ್ತು. ಕೋವಿಡ್ ಬಿಕ್ಕಟ್ಟಿನಿಂದಾಗಿ 3 ವರ್ಷಗಳ ಅಂತರದ ನಂತರ ನಡೆಯುತ್ತಿರುವ ಭೇಟಿ ಇದಾಗಿದೆ. ಭಾರತ ಪ್ರವಾಸದ ವೇಳೆ ಝಾಬಿ ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿಯ ವೇಳೆ ರಕ್ಷಣಾ ಉತ್ಪನ್ನಗಳ ಖರೀದಿ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ.

ಫೆಬ್ರವರಿಯಲ್ಲಿ ಒಮಾನ್ನ ವಾಯುಪಡೆಯ ಮುಖ್ಯಸ್ಥರು ಮತ್ತು ರಾಯಲ್ ನೌಕಾಪಡೆ ಮುಖ್ಯಸ್ಥರು ಸಹ ಭಾರತಕ್ಕೆ ಭೇಟಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ