ನವದೆಹಲಿ : ಸಂಪುಟ ವಿಸ್ತರಣೆ ಕಸರತ್ತು ಕೊನೆಗೊಂಡಿಲ್ಲ. ಬುಧವಾರ ರಾತ್ರಿಯಿಂದ ದೆಹಲಿಯಲ್ಲಿ ಸಭೆ ಮೇಲೆ ಸಭೆಗಳು ನಡೆದ್ರೂ ಒಮ್ಮತಾಭಿಪ್ರಾಯ ಮೂಡಿಲ್ಲ.
18 ಶಾಸಕರ ಹೆಸರು ಹೆಚ್ಚುಕಡಿಮೆ ಫೈನಲ್ ಆಗಿದ್ದು, ಇನ್ನುಳಿದವರ ಆಯ್ಕೆಗೆ ಕಸರತ್ತು ನಡೆದಿದೆ. ಇತರೆ ಪ್ರಮುಖ ಸಮುದಾಯಗಳಿಗೂ ಡಿಸಿಎಂ ಹುದ್ದೆ ಕೊಡಬೇಕು ಎನ್ನುವ ಮೂಲಕ ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಸಿಎಂ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿಸಲು ನೋಡಿದ್ದಾರೆ.
ಈ ಬಾರಿ ಪ್ರಮುಖ ಸಮುದಾಯಗಳೆಲ್ಲಾ ಪಕ್ಷವನ್ನು ಬೆಂಬಲಿಸಿವೆ. ಹೀಗಾಗಿ ಎಸ್ಸಿ, ಎಸ್ಟಿ ಹಾಗೂ ಲಿಂಗಾಯತ ಸಮುದಾಯಗಳು ಕೂಡ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿವೆ ಎಂಬ ದಾಳವನ್ನು ಸಿಎಂ ಉರುಳಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ಬಯಸಿದ್ದ ಬೆಂಗಳೂರು ಅಭಿವೃದ್ಧಿ ಖಾತೆ ಬಿಬಿಎಂಪಿ ಚುನಾವಣೆ ಆಗೋವರೆಗೆ ತನ್ನ ಬಳಿಯೇ ಇರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.