ದೆಹಲಿಯಿಂದ ಬೆಂಗಳೂರಿಗೆ ಕಾಂಗ್ರೆಸ್ ಶಾಸಕರು ಆಗಮಿಸಿದ್ದು,ಇಂದು ಸಂಜೆ ಸಿ.ಎಲ್.ಪಿ ಸಭೆ ನಡೆಯಲಿದೆ.ಸಭೆಯಲ್ಲಿ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ.ಮಾಗಡಿ ಶಾಸಕ ಬಾಲಕೃಷ್ಣ,ದೇವನಹಳ್ಳಿ ಶಾಸಕ ಕೆ.ಹೆಚ್.ಮುನಿಯಪ್ಪ,ಗದಗ ಶಾಸಕ ಹೆಚ್.ಕೆ.ಪಾಟೀಲ್ ಆಗಮಿಸಿದ್ದು,
ಏರ್ಪೋರ್ಟ್ ನಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದ್ದು,ನಾನು ಸಹ ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿ,ನಮ್ಮ ನಾಯಕ ಡಿಕೆ.ಶಿವಕುಮಾರ್ ಆದೇಶದಂತೆ ಮುನ್ನಡೆಯುತ್ತೇವೆ.ಅಧಿಕಾರ ಎರಡೂವರೆ ವರ್ಷ ಹಂಚಿಕೆ ಆಗಲಿದೆ.ಮೊದಲ ಹಂತದ ನಾಯಕರಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.
ದೇವನಹಳ್ಳಿ ಶಾಸಕ ಕೆ.ಹೆಚ್.ಮುನಿಯಪ್ಪ ಏರ್ಪೋರ್ಟ್ ನಲ್ಲಿ ಪ್ರತಿಕ್ರಿಯಿಸಿದ್ದು,ಬೆಂಗಳೂರು ಗ್ರಾ.ಕ್ಕೆ ಸಚಿವ ಸ್ಥಾನ ಸಿಗಲಿದೆಯಾ ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದ್ದಾರೆ.ಕೇಂದ್ರ ಸಚಿವ ಸ್ಥಾನ ಕಂಡವರಿಗೆ ರಾಜ್ಯ ಖಾತೆ ದೊಡ್ಡದಲ್ಲ.ದೇವನಹಳ್ಳಿ-ವಿಜಯಪುರ ಗಳಲ್ಲಿ ಡಿಸಿಎಂ ಸ್ಥಾನಕ್ಕಾಗಿ ಕೆ.ಹೆಚ್.ಎಂ. ಪರ ಹೋರಾಟ ಮಾಡಿದ್ದಾರೆ.ಬೆಂಗಳೂರು ಗ್ರಾ.ಜಿಲ್ಲೆಯ ಜನತೆಗೆ ಧನ್ಯವಾದ.ನನಗೂ ಸಚಿವ ಸ್ಥಾನ ಸಿಗುತ್ತೆ ಎನ್ನುವ ಬಗ್ಗೆ ಏನೂ ಮಾತನಾಡಲ್ಲ ಅಂತಾ ಹೇಳಿದ್ದಾರೆ.