ಕೇಂದ್ರದಿಂದ ಜಡ್ಜ್ ಗಳಿಗೊಂದು ಭರ್ಜರಿ ಕೊಡುಗೆ; 200 ಪಟ್ಟು ಹೆಚ್ಚಾದ ವೇತನ
ಬುಧವಾರ, 31 ಜನವರಿ 2018 (07:31 IST)
ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆಯೊಂದು ಸಿಕ್ಕಿದೆ. ನ್ಯಾಯಾಂಗ ವ್ಯವಸ್ಥೆ ಬಿಕ್ಕಟ್ಟಿನಲ್ಲಿದೆ ಎಂಬ ಚರ್ಚೆ ನಡುವೆಯೇ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಶೇಕಡ 200ರಷ್ಟು ಹೆಚ್ಚಳ ಮಾಡುವ ಮೂಲಕ ನ್ಯಾಯಮೂರ್ತಿಗಳಿಗೆ ಒಂದೊಳ್ಳೆ ಕೊಡುಗೆ ನೀಡಿದೆ. ಜನವರಿ 27ರಂದು ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ವೇತನ 2016ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಯಾಗಲಿದೆ.
ಸುಪ್ರೀಂ ಕೋರ್ಟ್ ಹಾಗೂ 24 ಹೈಕೋರ್ಟ್‌ಗಳ ಹಾಲಿ ಹಾಗೂ ನಿವೃತ್ತ ನ್ಯಾಯಮೂರ್ತಿಗಳಿಗೆ ಪರಿಷ್ಕೃತ ವೇತನದ ಲಾಭಗಳು ಸಿಗಲಿವೆ. ಗೆಜೆಟ್ ಅಧಿಸೂಚನೆ ಪ್ರಕಾರ, ಸಿಜೆಐ ಅವರ ಹಾಲಿ ಮಾಸಿಕ ವೇತನ (ತುಟ್ಟಿಭತ್ಯೆ ಹಾಗೂ ಇತರೆ ಭತ್ಯೆಗಳು ಹೊರತುಪಡಿಸಿ) 1 ಲಕ್ಷ ರೂ. ಇದ್ದು, ಹೊಸ ನಿಯಮದ ಅನುಸಾರ ಅವರ ಸಂಬಳ 2.80 ಲಕ್ಷ ರೂ.ಗೆ ಏರಿಕೆಯಾಗಲಿದೆ. ಇದರ ಜತೆಗೆ ಅಧಿಕೃತ ನಿವಾಸ, ಕಾರು, ಸಿಬ್ಬಂದಿ ನಿರ್ವಹಣೆ ವೆಚ್ಚ ಹಾಗೂ ಇತರೆ ಭತ್ಯೆಗಳು ಹೆಚ್ಚುವರಿಯಾಗಿ ಸೇರಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ