ವಿರಾಟ್ ಕೊಹ್ಲಿ ಪ್ರಿಯತಮೆ ಯಾರು: ಶಾಲಾ ಮಕ್ಕಳಿಗೆ ಪರೀಕ್ಷಾ ಪ್ರಶ್ನೆ

ಮಂಗಳವಾರ, 18 ಅಕ್ಟೋಬರ್ 2016 (10:51 IST)
ಸಾಮಾನ್ಯವಾಗಿ ಮಕ್ಕಳಿಗೆ ಶಾಲಾ ಪರೀಕ್ಷೆಯಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಸಾಮಾನ್ಯ ಜ್ಞಾನದ ಪರೀಕ್ಷೆಯಾದರೆ ಆ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ತಿಳಿದುಕೊಂಡಿರಬೇಕಾದ ವಿಷಯಗಳಿಗನುಗುಣವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ ಮಹಾರಾಷ್ಟ್ರದ ಶಾಲೆಯೊಂದು, ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಿಯತಮೆ ಯಾರು ಎಂಬ ಪ್ರಶ್ನೆಯನ್ನು ಕೇಳಿದೆ. 


 
ಬಿವಾಂಡಿಯಲ್ಲಿನ ಚಾಚಾ ನೆಹರು ಹಿಂದಿ ಹೈಸ್ಕೂಲ್‌ನಲ್ಲಿ 9ನೇ ತರಗತಿಯ ದೈಹಿಕ ಶಿಕ್ಷಣ ಪರೀಕ್ಷೆಯಲ್ಲಿ ಬಿಟ್ಟ ಸ್ಥಳ ತುಂಬಿರಿ ಎಂದು ವಿರಾಟ್ ಕೊಹ್ಲಿ ಪ್ರಿಯತಮೆ ಹೆಸರು ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಆಯ್ಕೆಯಾಗಿ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಮತ್ತು ದೀಪಿಕಾ ಪಡುಕೋಣೆ ಈ ಮೂರು ಆಯ್ಕೆಗಳನ್ನು ನೀಡಲಾಗಿತ್ತು.
 
ಪ್ರೌಢ ಶಾಲೆಯ ಈ ಅಚಾತುರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ವಿರಾಟ್ ಕೊಹ್ಲಿ ಬಗ್ಗೆ ತಿಳಿದುಕೊಂಡಿರಬೇಕಾದದ್ದು ಅತ್ಯವಶ್ಯ. ಆದರೆ ಅವರ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳುವುದು ಸಹ ಮಹತ್ವ ಎಂಬುದನ್ನು ಈ ಶಾಲೆ ಪರಿಗಣಿಸಿದ್ದು ಯಾಕೆ? ಇದೆಷ್ಟು ಸಮಂಜಸ ಎಂದು ಸಾರ್ವಜನಿಕ ಪ್ರಶ್ನೆಗೆ ಮಹಾಪ್ರಮಾದವನ್ನೆಸಗಿರುವ ಶಾಲೆ ಈಗ ಉತ್ತರಿಸಬೇಕಿದೆ. 
 
ಈ ಹಿಂದೆ ಸಿವಿಲ್ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಬಾಹುಬಲಿ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದು ವಿವಾದವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ