ಎಳೆನೀರು ಟೆಂಗಿನಕಾಯಿ ಕಟ್ ಮಾಡುವವರು ಬೇಕಾಗಿದ್ದಾರೆ, ವೇತನ 32 ಸಾವಿರ
ಶುಕ್ರವಾರ, 15 ಮಾರ್ಚ್ 2019 (19:33 IST)
ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ರೂಪಾಯಿಗಳ ಹಣ ಪಾವತಿಸಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಡ್ಮಿಶನ್ ಕೊಡಿಸಿರುತ್ತಾರೆ. ಮಕ್ಕಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಕನಸು ಹೊಂದಿರುತ್ತಾರೆ.
ಆದರೆ, ಇಂಜಿನಿಯರಿಂಗ್ ಅಥವಾ ವೈದ್ಯ ಪದವಿ ಪಡೆದ ಯುವಕರು 20 ಸಾವಿರ ದಿಂದ 40 ಸಾವಿರ ರೂಪಾಯಿಗಳ ಮಾಸಿಕ ವೇತನಕ್ಕೆ ದುಡಿಯುತ್ತಿರುವುದನ್ನು ನಾವು ಕಾಣುತ್ತಿರುತ್ತೇವೆ.
ಆದರೆ, ಕೆಲವರು ಅನಕ್ಷರಸ್ಥರಾಗಿದ್ದರೂ ಕೋಟಿಶ್ವರರಾಗಿರುತ್ತಾರೆ. ನಮ್ಮ ಕಣ್ಣಮುಂದೆ ಸಣ್ಣದೊಂದು ವಹಿವಾಟು ಆರಂಭಿಸಿ ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ರೂ ಸಂಪಾದಿಸಿರುವುದನ್ನು ನಾವು ಕಾಣುತ್ತೇವೆ.
ಇಂದು ಚೆನ್ನೈನಲ್ಲಿ ಪ್ರಕಟವಾಗಿರುವ ಪತ್ರಿಕೆಯೊಂದರಲ್ಲಿ ಉದ್ಯೋಗವಕಾಶದ ಕಾಲಂ ಪ್ರತಿಯೊಬ್ಬರನ್ನು ಹುಬ್ಬೇರಿಸುವಂತೆ ಮಾಡಿದೆ. ಅದೆನೆಂದರೆ ಎಳೆನೀರು ಟೆಂಗಿನಕಾಯಿಯನ್ನು ಕತ್ತರಿಸಿ ಕೊಡುವ ಉದ್ಯೋಗ. ವೇತನ ಎಷ್ಟು ಗೊತ್ತಾ ಬರೋಬ್ಬರಿ 22 ಸಾವಿರದಿಂದ 32 ಸಾವಿರದವರೆಗೆ.
ಪತ್ರಿಕೆಯಲ್ಲಿ ಉದ್ಯೋಗ ಅವಕಾಶ ಪ್ರಕಟಿಸಿದವರನ್ನು ಸಂಪರ್ಕಿಸಿದಾಗ ಸುದ್ದಿ ನಿಜವೆಂದು ತಿಳಿದು ಬಂದಿದೆ. ಟೆಂಗಿನಕಾಯಿ ಕಟ್ ಮಾಡಲು 30 ಸಾವಿರ ವೇತನ ಕೊಡಲು ಸಿದ್ದರಾದ ವಹಿವಾಟುದಾರರಿಗೆ ಎಷ್ಟು ಲಾಭ ದೊರೆಯುತ್ತದೆ ಎನ್ನುವುದನ್ನು ನೀವೇ ಉಹಿಸಿ.