ಜೈಲ್ ಭರೋ ನಡೆಸಿದ ನೌಕರರು…

ಶುಕ್ರವಾರ, 10 ಆಗಸ್ಟ್ 2018 (12:39 IST)
ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಆ ಬಳಿಕ ಬಿಡುಗಡೆಗೊಳಿಸಿದ ಘಟನೆ ನಡೆದಿದೆ.

ಗ್ರಾಮ ಪಂಚಾಯತ್ ನೌಕರರಿಗೆ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿ ಯಾದಗಿರಿಯಲ್ಲಿ ವಿವಿಧ ಸಂಘಟನೆಗಳು ಜೈಲ್ ಭರೋ ಚಳುವಳಿ ನಡೆಸಿದವು. ನಗರದ ಜಿಲ್ಲಾಡಳಿತ ಕಚೇರಿ ಬಳಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ರು. ಗ್ರಾಮ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತೆ ಗಾರರು, ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಹಾಗೂ ಡೇಟಾ ಎಂಟ್ರಿ ಅಪರೇಟರ್ ಗಳಿಗೆ ಕನಿಷ್ಠ 18 ಸಾವಿರ ರೂಪಾಯಿ ವೇತನ ನೀಡಬೇಕು . ಆದ್ರೆ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ.

ಗ್ರಾ. ಪಂ. ನೌಕರರಿಗೆ ಪೆನ್ಸನ್ ನೀಡಬೇಕೆಂದು ಪಟ್ಟ ಹಿಡಿದ್ರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು. ಈ ವೇಳೆ ಪೊಲೀಸರು ಪ್ರತಿಭಟನೆಕಾರರನ್ನು ಬಂಧಿಸಿ ಆ ಬಳಿಕ ಬಿಡುಗಡೆಗೊಳಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ