ಎಐಎಡಿಎಂಕೆ ಮುಖ್ಯಸ್ಥೆ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಸುಮಾರು ಎರಡು ತಿಂಗಳುಗಳ ಕಾಲ ತಮ್ಮ ಪೋಯಿಸ್ ಗಾರ್ಡನ್ ನಿವಾಸದಲ್ಲಿ ನಾಯಿಯಂತೆ ಬಂಧನದಲ್ಲಿಟ್ಟು ರಾಜೀನಾಮೆ ಕೊಡುವಂತೆ ಒತ್ತಡೃ ಹೇರಿದ್ದರು ಎಂದು ಎಐಎಡಿಎಂಕೆ ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಪಾ ಆರೋಪಿಸಿದ್ದಾರೆ.
ಸಂಸತ್ತಿನ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳುಗಳಿಂದ ನನಗೆ ಮನೆಗೆ ಹೋಗಲು ಅವಕಾಶ ನೀಡಲಿಲ್ಲ. ಅವರ ಮನೆಯಲ್ಲಿ ನಾಯಿಯಂತೆ ಕಟ್ಟಿಹಾಕಿ ಜೀವ ಬೆದರಿಕೆಯೊಡ್ಡಲಾಗಿತ್ತು ಎಂದು ಸಿಎಂ ಜಯಲಲಿತಾ ವಿರುದ್ಧ ಗಂಬೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಕಟಣೆಯೊಂದನ್ನು ಹೊರಡಿಸಿ, ಪಕ್ಷದ ಸಿದ್ದಾಂತಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂಸದೆ ಶಶಿಕಲಾ ಪುಷ್ಪಾ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳು ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಘೋಷಿಸಿದ್ದಾರೆ.