ಗಾಂಧೀಜಿ ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ
ಬಾಪು ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ನಮ್ಮೆಲ್ಲರ ಪ್ರಯತ್ನವಾಗಿದೆ ಎಂದ ಅವರು, ಇಂದು, ಹುತಾತ್ಮರ ದಿನದಂದು, ನಮ್ಮ ದೇಶವನ್ನು ಧೈರ್ಯದಿಂದ ರಕ್ಷಿಸಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತೇನೆ.
ಇಂದು ಪ್ರಸಾರವಾಗುವ 85 ನೇ ಸಂಚಿಕೆಯ ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ವರ್ಷದ ಮೊದಲ ಆವೃತ್ತಿಯಾಗಲಿದೆ. ಇಂದು ಗಾಂಧೀಜಿ ಅವರ ಪುಣ್ಯ ತಿಥಿಯಾದ್ದರಿಂದ ಅವರ ಸ್ಮರಣೆಯನ್ನು ಮಾಡಿದ ನಂತರ ಪ್ರಾರಂಭವಾಗುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.