ಮದುವೆಯ ನೆಪ ಹೊಡ್ಡಿ ಹಣ ದೋಚುವ ಭೂಪ!

ಮಂಗಳವಾರ, 15 ಫೆಬ್ರವರಿ 2022 (07:15 IST)
ನವದೆಹಲಿ : 48 ವರ್ಷಗಳಲ್ಲಿ ಏಳು ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾದ ಲಿಂಗಾಕಾಮಿಯೊಬ್ಬನನ್ನು ಭುವನೇಶ್ವರದಲ್ಲಿ ಪೊಲೀಸರು ಬಂಧಿಸಿದ್ದಾರೆ.
 
ಆರೋಪಿ ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿಯಗಿದ್ದು, ತಾನು ಓಡಿಹೋಗುವ ಮುನ್ನ ಮಹಿಳೆಯರಿಂದ ಹಣವನ್ನು ಪಡೆದು ವಂಚಿಸಿ ಪರಾರಿಯಾಗುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಬಂಧಿತ ಆರೋಪಿ ಈ ಹೇಳಿಕೆಯನ್ನು ನಿರಾಕರಿಸಿದ್ದಾನೆ.

1982 ರಲ್ಲಿ ಆರೋಪಿ ಮೊದಲ ಬಾರಿಗೆ ಮದುವೆಯಾದನು. ನಂತರ 2002ರಲ್ಲಿ ಎರಡನೇ ಬಾರಿಗೆ ಮತ್ತೊಂದು ವಿವಾಹವಾದನು. ತನ್ನ ಎರಡು ಪತ್ನಿಯರಿಂದ ಐದು ಮಕ್ಕಳಿಗೆ ತಂದೆಯಾಗಿದ್ದನು. 2002 ಮತ್ತು 2020ರ ನಡುವೆ ಮತ್ತೆ ಮ್ಯಾಟ್ರಿಮೋನಿ ವೆಬ್ಸೈಟ್ಗಳ ಮೂಲಕ ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ವಿವಾಹವಾಗಿದ್ದಾನೆ ಎಂದು ಭುವನೇಶ್ವರ ಪೊಲೀಸ್ ಉಪ ಆಯುಕ್ತ ಉಮಾಶಂಕರ್ ದಾಶ್ ಹೇಳಿದ್ದಾರೆ. 

ಆರೋಪಿ ಕೊನೆಯದಾಗಿ ಶಾಲಾ ಶಿಕ್ಷಕಿಯೊಬ್ಬರನ್ನು ಮದುವೆಯಾಗಿ ದೆಹಲಿಯಲ್ಲಿ ತಂಗಿದ್ದ, ಆದರೆ ಆಕೆಯ ಹೇಗೋ ಸತ್ಯ ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದನು.

ಅದರಲ್ಲಿಯೂ ಹೆಚ್ಚಾಗಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿರುವ ವಿಚ್ಛೇದಿತ ಮಹಿಳೆಯರ ಜೊತೆ ಸ್ನೇಹ ಬೆಳೆಸಿ ವಿವಾಹವಾಗಿ ನಂತರ ಅವರನ್ನು ಬಿಟ್ಟು ಹೋಗುವ ಮುನ್ನ ಹಣದೋಚಿ ಪರಾರಿಯಾಗುತ್ತಿದ್ದ ಎಂದು ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ