ಪಶ್ಚಿಮ ಬಂಗಾಳಕ್ಕೆ ಮರುನಾಮಕರಣ: ಆಂಗ್ಲ ಭಾಷೆಯಲ್ಲಿ ಬೆಂಗಾಲ್, ಬಂಗಾಲಿಯಲ್ಲಿ ಬಂಗಾ

ಮಂಗಳವಾರ, 2 ಆಗಸ್ಟ್ 2016 (18:00 IST)
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ಪಶ್ಚಿಮ ಬಂಗಾಳವನ್ನು ಆಂಗ್ಲ ಭಾಷೆಯಲ್ಲಿ ಬೆಂಗಾಲ್ ಮತ್ತು ಬೆಂಗಾಲಿ ಭಾಷೆಯಲ್ಲಿ ಬಂಗಾ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
 
ಕೇಂದ್ರ ಸರಕಾರದ ಸಭೆಗಳಲ್ಲಿ ನಮ್ಮ ಬೇಡಿಕೆಗಳನ್ನು ಮತ್ತಷ್ಟು ಉತ್ತಮವಾಗಿ ಮಂಡಿಸಲು ನಮ್ಮ ರಾಜ್ಯದ ಹೆಸರನ್ನು ಬಂಗ್ಲಾ ಅಥವಾ ಬೆಂಗಾಲ್ ಎಂದು ಬದಲಿಸಲು ನಿರ್ಧರಿಸಿದ್ದೇವೆ. ರಾಜ್ಯದ ಮರುನಾಮಕರಣಕ್ಕಾಗಿ ಆಗಸ್ಟ್ 26 ರಂದು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ವಾರ್ತಾ ಖಾತೆ ಸಚಿವ ಪಾರ್ಥಾ ಚಟರ್ಜಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. 
 
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಮರುನಾಮಕರಣ ಮಾಡಿ ಬೆಂಗಾಳಿ ಭಾಷೆಯಲ್ಲಿ ಬಂಗಾ ಅಥವಾ ಬಾಂಗ್ಲಾ ಮತ್ತು ಆಂಗ್ಲ ಭಾಷೆಯಲ್ಲಿ ಸರಳವಾಗಿ ಬೆಂಗಾಲ್ ಎನ್ನುವ ಹೆಸರನ್ನಿಡಲು ಬಯಸಿದ್ದಾರೆ ಎಂದು  ಚಟರ್ಜಿ ಮಾಹಿತಿ ನೀಡಿದ್ದಾರೆ.
 
ಸೆಪ್ಟೆಂಬರ್ ತಿಂಗಳಿನಿಂದ ಪಶ್ಚಿಮ ಬಂಗಾಳವನ್ನು ಮರುನಾಮಕರಣಗೊಳಿಸಿ ಹೊಸ ಹೆಸರನ್ನು ಬಳಸುವಂತೆ ಆದೇಶ ನೀಡಲಾಗುವುದು ಎಂದು ವಾರ್ತಾ ಖಾತೆ ಸಚಿವ ಪಾರ್ಥಾ ಚಟರ್ಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ