ನವದೆಹಲಿ : ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಿಪಿಐ(ಎಂ) ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿತ್ತು. ಇಲ್ಲಿ ನೆಲೆಸಿರುವ ನಿವಾಸಿಗಳು ಅನಧಿಕೃತ ನಿವಾಸಿಗಳಲ್ಲ.
ಈ ಆಸ್ತಿಗಳ ನೆಲಸಮ ಪ್ರಕ್ರಿಯೆ ನೈಸರ್ಗಿಕ ನ್ಯಾಯ ಮತ್ತು ಭಾರತದ ಸಂವಿಧಾನದ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಕಾನೂನುಬಾಹಿರ ಮತ್ತು ಅಮಾನವೀಯ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನಾ. ನಾಗೇಶ್ವರ್ ರಾವ್ ಮತ್ತು ನ್ಯಾ.ಬಿಆರ್ ಘವಿ ಅವರಿದ್ಧ ದ್ವಿಸದಸ್ಯ ಪೀಠ, ಇದರಲ್ಲಿ ರಾಜಕೀಯ ಪಕ್ಷದ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ಖಾರವಾಗಿ ಪ್ರಶ್ನಿಸಿತು.
ಸಂತ್ರಸ್ತ ವ್ಯಕ್ತಿ ಇಲ್ಲಿಗೆ ಅರ್ಜಿ ಸಲ್ಲಿಸಿದರೆ ನಾವು ಅದನ್ನು ಅರ್ಥಮಾಡಿಕೊಳ್ಳಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದದಂತೆಯಾವುದೇ ವ್ಯಕ್ತಿ ಇಲ್ಲವೇ? ಸಂತ್ರಸ್ತ ವ್ಯಕ್ತಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿ. ಈ ಅರ್ಜಿಯನ್ನು ನಾವು ಮಾನ್ಯ ಮಾಡುವುದಿಲ್ಲ ಎಂದು ಹೇಳಿತು.