ಅತ್ಯಾಚಾರ ಎಸಗಿದ ಹುಡುಗಿಯನ್ನು ಮದುವೆಯಾಗಲು ಆರೋಪಿಯ ತಂದೆ ಹಾಕಿದ ಷರತ್ತೇನು ಗೊತ್ತೇ?
ಶುಕ್ರವಾರ, 29 ಜನವರಿ 2021 (07:09 IST)
ಬಲ್ಲಿಯಾ : 21 ವರ್ಷದ ಮುಸ್ಲಿಂ ಯುವಕನೊಬ್ಬ 14 ವರ್ಷದ ಹುಡುಗಿಯ ಮೇಲೆ ಮಾನಭಂಗ ಎಸಗಿ ಅದನ್ನು ವಿಡಿಯೋ ಮಾಡಿಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಸಂಬಂಧ ಹೊಂದಲು ಒತ್ತಾಯಿಸಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಹುಡುಗಿ ಮನೆಯಲ್ಲಿ ಒಬ್ಬಳೆ ಇದ್ದಾಗ ಮನೆಗೆ ನುಗ್ಗಿದ ಯುವಕ ಇಂತಹ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ವಿಚಾರಿಸಲು ಯುವಕನ ಮನೆಗೆ ಬಂದ ಸಂತ್ರಸ್ತೆಯ ತಂದೆಯ ಬಳಿಕ ಯುವಕನ ತಂದೆ ಆಕೆ ತಮ್ಮ ಧರ್ಮಕ್ಕೆ ಮತಾಂತರವಾದರೆ ಮಗನಿಗೆ ಮದುವೆ ಮಾಡಿಸುವುದಾಗಿ ಹೇಳಿದ್ದಾನೆ.
ಈ ಬಗ್ಗೆ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.