ಪೂಜೆ ಮಾಡುವ ನೆಪದಲ್ಲಿ ಕೋಣೆಗೆ ಕರೆದ ಬಾಬ ಮಹಿಳೆಗೆ ಮಾಡಿದ್ದೇನು?
ಶುಕ್ರವಾರ, 11 ಸೆಪ್ಟಂಬರ್ 2020 (07:38 IST)
ಭೋಪಾಲ್ : ಮಕ್ಕಳ ಭಾಗ್ಯ ನೀಡುವ ಪೂಜೆ ಮಾಡುತ್ತೇನೆ ಎಂದು ಮಹಿಳೆಯ ಮೇಲೆ ತಾಂತ್ರಿಕ ಬಾಬನೊಬ್ಬ ಮಾನಭಂಗ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹಿಳೆಗೆ ಮದುವೆಯಾಗಿ 1 ವರ್ಷವಾದರೂ ಮಕ್ಕಳಾಗದ ಕಾರಣ ಆಕೆಯ ಪತಿ ಹಾಗೂ ಮೈದುನರು ಸೇರಿ ಈ ಬಾಬನ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಬ ಪೂಜೆ ಮಾಡುವ ನೆಪದಲ್ಲಿ ಮಹಿಳೆಯನ್ನು ಕೋಣೆಗೆ ಕರೆದುಕೊಂಡು ಹೋಗಿ ಆಕೆಯ ಶೀಲ ಕೆಡಿಸಿದ್ದಾನೆ.
ಈ ಬಗ್ಗೆ ಮಹಿಳೆ ಬೈರ್ಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಬಾಬನ ಜೊತೆಗೆ ಆಕೆಯ ಪತಿ ಹಾಗೂ ಮೈದುನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.