ಅನಂತ ಕುಮಾರ್ ಹೆಗಡೆಗೆ ಪ್ರಕಾಶ್ ರೈ ಬರೆದ ಪತ್ರದಲ್ಲಿ ಏನಿದೆ ಗೊತ್ತಾ...?
'ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಜಾತ್ಯಾತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಕೊಳ್ಳುವುದಾಗಿದೆ' ಎಂದು ಹೇಳಿದ್ದಾರೆ.
'ಜಾತ್ಯಾತೀತ ಎಂದರೆ ಯಾವುದೇ ಧರ್ಮ ಅಥವಾ ನಂಬಿಕೆಯ ಜತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ. ಒಬ್ಬನ ಪೋಷಕರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು ಮಾಡಿದೆ' ಎಂದು ಪ್ರಕಾಶ್ ರೈ ಹೆಗಡೆಗೆ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ.
'ಜಾತ್ಯಾತೀತರು ಎಂದರೆ ತಂದೆ-ತಾಯಿ ಇಲ್ಲದವರು' ಎಂದು ಅನಂತ ಕುಮಾರ್ ಹೆಗಡೆ ಜಾತ್ಯಾತೀತರನ್ನು ಟೀಕಿಸಿದ್ದರು.