ಹಳೆ 500,1000 ರೂ. ನೋಟುಗಳು ಏನಾಗ್ತಾ ಇವೆ ಗೊತ್ತಾ?!

ಭಾನುವಾರ, 9 ಏಪ್ರಿಲ್ 2017 (12:47 IST)
ನವದೆಹಲಿ: ದೇಶದಲ್ಲಿ 500,1000 ರೂ. ನೋಟುಗಳು ನಿಷೇಧವಾದ ಮೇಲೆ ಕಪ್ಪು ಹಣ ಇಟ್ಟುಕೊಂಡವರು ಮೈ ಮೇಲೆ ಇರುವೆ ಬಿಟ್ಟುಕೊಳ್ಳುವಂತಾಗಿದೆ. ಈ ಹಳೆ ನೋಟುಗಳು ಏನಾಗ್ತಾ ಇವೆ ಗೊತ್ತಾ?

 

ಕೊರಿಯರ್ ಮೂಲಕ ವಿದೇಶಕ್ಕೆ ರವಾನೆಯಾಗುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಭಾರತೀಯ ಮೂಲದ ವಿದೇಶಿಯರಿಗೆ ಹಳೆ ನೋಟುಗಳನ್ನು ಬದಲಾಯಿಸಲು ಜೂನ್ 30 ರವರೆಗೆ ಅವಕಾಶವಿದೆ. ಹೀಗಾಗಿ ವಿದೇಶದಲ್ಲಿರುವವರ ಮೂಲಕ ಹಣ ಬದಲಿಸಲು ಈ ಮಾರ್ಗ ಅನುಸರಿಸುತ್ತದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 
ಇಂತಹ ಸುಮಾರು 1 ಲಕ್ಷ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವರ ಮೇಲೆ ಪ್ರಕರಣ ದಾಖಲಿಸಾಗಿದೆ. ವಿಶೇಷವೆಂದರೆ ಈ ಹಣದ ಕಂತೆಯನ್ನು ಪುಸ್ತಕ ಎಂದೆಲ್ಲಾ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ