ಇಂಡಿಯಾಸ್ ಬಿಸ್ಮಾರ್ಕ್ ಕುರಿತಂತೆ ಆಡ್ವಾಣಿ, ಅಂದಿನ ಪ್ರಧಾನಮಂತ್ರಿ ನೆಹರು ಅಂದು ಗೃಹ ಸಚಿವರಾಗಿದ್ದ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಸಲಹೆ ಮತ್ತು ಶಿಫಾರಸ್ಸುಗಳನ್ನು ಯಾವ ರೀತಿ ವಿರೋಧಿಸುತ್ತಿದ್ದರು ಎನ್ನುವ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ದಾಖಲಿಸಿದ್ದಾರೆ.
ನಂತರ, ಅಂದಿನ ಗವರ್ನರ್ ಜನರಲ್ ರಾಜಗೋಪಾಲಚಾರಿ, ಗೃಹ ಸಚಿವ ಪಟೇಲ್ ಮತ್ತು ಗೃಹ ಕಾರ್ಯದರ್ಶಿ ಮೆನನ್ ಪರಸ್ಪರರು ಚರ್ಚಿಸಿ ಹೈದ್ರಾಬಾದ್ ನಿಜಾಮರ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ವಿವರಣೆ ನೀಡಿದ್ದಾರೆ.